ದಾವಣಗೆರೆ: ಸಂವೇದ-2018 ಕಾರ್ಯಕ್ರಮ
ದಾವಣಗೆರೆ,ಮಾ.4: ಕಲಿಕೆ ಹುಟ್ಟಿನಿಂದ ಸಾಯುವವರೆಗೂ ನಡೆಯುವ ಪ್ರಕ್ರಿಯೆ. ವಿದ್ಯಾರ್ಥಿ ಜೀವನದಲ್ಲಿ ಪಠ್ಯ ಹಾಗೂ ಪಠ್ಯೇತರವಾಗಿ ಕಲಿಯುವ ಜೊತೆಗೆ ಸಮಾಜದ ಆಗು-ಹೋಗುಗಳನ್ನು ಅರಿತು ಬೆಳೆದರೆ ವ್ಯಕ್ತಿತ್ವ ರೂಪಗೊಳ್ಳಲಿದೆ ಎಂದು ದಾ.ವಿ.ವಿ ಪ್ರಭಾರಿ ಕುಲಪತಿ ಡಾ. ಬಿ.ಪಿ ವೀರಭದ್ರಪ್ಪ ಹೇಳಿದರು.
ನಗರದ ಎಸ್.ಎಸ್ ಬಡಾವಣೆಯ ಸುಶೀಲಮ್ಮ ಬಂಕಾಪುರದ ಚನ್ನಬಸಪ್ಪ ಪ್ರಥಮ ದರ್ಜೆ ಮಹಿಳಾ ಕಾಲೇಜು (ಎಸ್.ಬಿ.ಸಿ) ಹಾಗೂ ಅಥಣಿ ಸ್ನಾತಕೋತ್ತರ ಕೇಂದ್ರದಲ್ಲಿ ನಡೆದ ಸಂವೇದ-2018 ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದ ಅವರು, ಪ್ರತಿಯೊಬ್ಬರೂ ಸಮಾಜದಲ್ಲಿ ಕಲಿಯಬೇಕಾದ ವಿಚಾರಗಳು ನಿರಂತರವಾಗಿ ನಡೆಯುತ್ತಿರುತ್ತದೆ. ಉತ್ತಮವಾದ ಜ್ಞಾನ ಹಾಗೂ ಬದ್ದತೆ ಇದ್ದರೆ ಜೀವನ ಸಮೃದ್ಧ ಹಾದಿ ಹಿಡಿಯುವುದು, ಸಂವೇದ ಒಂದು ಚಿಂತನೆ ಅದು ವ್ಯಕ್ತಿಯಲ್ಲಿ ಆಲೋಚನೆ ಉಂಟುಮಾಡಿ ಅವನ ಜೀವನದ ಭವಿಷ್ಯಕ್ಕೆ ಬೇಕಾದ ರೂಪ ನೀಡುತ್ತದೆ. ತಪ್ಪು ದಾರಿ ಹಿಡಿದಾಗ ನಮಗೆ ಕಾನೂನು ಬೇಕಾಗುತ್ತದೆ. ತಪ್ಪುಗಳು ಆಗದಂತೆ ಜೀವನ ನಡೆಸಬೇಕು. ಉತ್ತಮ ನಾಗರಿಕನಾಗಿ ಸಮಾಜ ಮುಖಿಯಾಗಿ ಇನ್ನೂಬ್ಬರೂ ತಪ್ಪನ್ನು ಮಾಡಿದರೆ ತಿದ್ದುವ ಪರಿಯಾಗಿ ಬೆಳೆಯಬೇಕು. ಲವಲವಿಕೆಯಿಂದ ಎಲ್ಲರೂ ಸಮೃದ್ದ ಜೀವನ ನಡೆಸಬೇಕು ಎಂದರು.
ಬೆಳಗಾವಿ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಸಿ.ಎಂ ತ್ಯಾಗರಾಜ್ ಮಾತನಾಡಿ, ಭಾರತದಲ್ಲಿ ಯುವ ಸಮುದಾಯ ಉತ್ತಮವಾಗಿಲ್ಲ. ಪದವಿಗಳಿಸಿದರೂ ಸರಿಯಾದ ಜೀವನ ನಡೆಸಲು ಸಾಧ್ಯವಾಗುತ್ತಿಲ್ಲ. ಕಾರಣ ಅವರಲ್ಲಿರುವ ಮನಸ್ಥಿತಿ. ಈಗಿನ ಪ್ರಸ್ತುತ ಸಮಾಜದ ಯುವಜನತೆ ಅಂತರ್ಜಾಲದಲ್ಲಿ ಮುಳುಗಿದೆ. ಪ್ರಪಂಚ ಬೆಳದಂತೆ ಬೆಳೆಯುವುದು ತಪ್ಪಲ್ಲ. ಆದರೆ, ಯಾವ ಮಾರ್ಗದಲ್ಲಿ ಹೊಗುತ್ತಿದ್ದೇವೆ ಎಂಬುದು ತಿಳಿದು ಮುಂದುವರೆಯಬೇಕು ಎಂದು ಹೇಳಿದರು.
ಯುವಶಕ್ತಿ ದೇಶದ ಆಸ್ತಿ, ನೀವು ತೆಗೆದುಕೊಳ್ಳುವ ನಿರ್ಧಾರ ನಿಮ್ಮ ಜೀವನ ರೂಪಿಸಲಿದೆ. ಆದ್ದರಿಂದ ಪ್ರತಿಯೊಬ್ಬರೂ ಒಂದೊದು ವಲಯದಲ್ಲಿ ಪ್ರಾವಿಣ್ಯತೆ ಬೆಳಸಿಕೊಳ್ಳಿ. ಒಂದು ಪದವಿ ಪಡೆದುಕೊಳ್ಳಿ, ಎಲ್ಲಾ ಭಾಷೆ ಕಲಿಯಿರಿ. ಭಾಷೆ ಇಲ್ಲದೆ ಬದುಕಿಲ್ಲ, ನಾಯಕನ ಗುಣಗಳನ್ನು ಅಳವಡಿಸಿಕೊಳ್ಳಿ ವಿಜ್ಞಾನ ಹಾಗೂ ತಂತ್ರಜ್ಞಾನವನ್ನು ಸಮರ್ಪಕವಾಗಿ ಉಪಯೋಗಿಸಿಕೊಳ್ಳಿ ಎಂದು ಕಿವಿಮಾತು ಹೇಳಿದರು.
ವಿದ್ಯಾರ್ಥಿ ಜೀವನದಲ್ಲಿ ಗುರು-ಶಿಷ್ಯರ ಸಂಬಂದ ಅಪರೂಪವಾದದು, ಹಿರಿಯರಿಗೆ ಗೌರವ ಕೊಡಿ. ತಂದೆ ತಾಯಿಗಳ ಕಷ್ಟವನ್ನು ಅರಿತು ಜೀವಿಸಿ. ಅವರ ನಂಬಿಕೆಯನ್ನು ಹಾಳು ಮಾಡಬೇಡಿ. ಆಧುನಿಕತೆಗೆ ಅವಲಂಭಿಗಳಾಗಬೇಡಿ. ವರ್ತಮಾನ ಕಾಲದ ಮೌಲ್ಯ ಬೆಳಸಿಕೊಳ್ಳಿ. ನೀವು ನೀವಾಗಿ ಬದುಕಿ, ಸರಿಯಾದ ಗುರಿಯನ್ನು ಇಟ್ಟುಕೊಂಡು ಗುರಗಳ ಮಾರ್ಗದರ್ಶನದಂತೆ ಮುನ್ನಡೆಯಿರಿ ಎಂದರು.
ವಿನಾಯಕ ಎಜುಕೇಷನ್‍ನ ಮ್ಯಾನೇಜಿಂಗ್ ಟ್ರಸ್ಟಿ ಅಥಣಿ ವೀರಣ್ಣ, ಪ್ರಾಂಶುಪಾಲ ಡಾ ಕೆ. ಷಣ್ಮುಖ, ಬಿ.ಎಸ್.ಸಿ ಕಾಲೇಜು ಅಧ್ಯಕ್ಷ ಬಿ.ಸಿ ಶಿವಕುಮಾರ್, ಆರ್ ವೆಂಕಟರೆಡ್ಡಿ, ರಾಜಶೇಖರ್, ಪಿ.ಎಸ್ ಗೀತಾ ಇದ್ದರು.