ಓ ಮೆಣಸೇ..

Update: 2018-03-05 06:59 GMT

ಅಲ್ಪಸಂಖ್ಯಾತರಲ್ಲಿ ವಿವಾಹ ನಂತರದ ಕೌಶಲ ಹೆಚ್ಚು- ಅನಂತಕುಮಾರ್ ಹೆಗಡೆ, ಕೇಂದ್ರ ಸಚಿವ
ಬಹುಸಂಖ್ಯಾತರಿಗೆ ಆ ಕುರಿತಂತೆ ವಿಶೇಷ ತರಬೇತಿ ಕಾರ್ಯಾಗಾರ ಹಮ್ಮಿಕೊಳ್ಳುವ ಯೋಜನೆ ಇದೆಯೇ?
---------------------
ಕ್ರೈಸ್ತ, ಇಸ್ಲಾಂ ಧರ್ಮದಲ್ಲಿರುವಂತೆ ಹಿಂದೂ ಧರ್ಮದಲ್ಲೂ ದೇವರು ಒಬ್ಬನೇ - ವಿಶ್ವೇಶತೀರ್ಥ ಸ್ವಾಮೀಜಿ, ಪೇಜಾವರ ಮಠ
ಜಗದ್ಗುರುಗಳು ಮಾತ್ರ ಗಲ್ಲಿಗೊಂದರಂತೆ.
---------------------
ಸಿದ್ದರಾಮಯ್ಯರ ಹಡಗು ಮುಳುಗುತ್ತಿದೆ - ಅಮಿತ್ ಶಾ, ಬಿಜೆಪಿ ಅಧ್ಯಕ್ಷ
ಈಗಾಗಲೇ ರಾಜ್ಯದಲ್ಲಿ ಮುಳುಗಿರುವ ಬಿಜೆಪಿಯ ತೆಪ್ಪದ ಗತಿಯೇನು?
---------------------
ಸಾಮಾಜಿಕ ಸ್ಥಾನಮಾನಗಳು ಏನೇ ಇದ್ದರೂ ಎಲ್ಲಾ ಹಿಂದೂಗಳು ಸೋದರರಿದ್ದಂತೆ - ಮೋಹನ್ ಭಾಗವತ್, ಆರೆಸ್ಸೆಸ್ ಮುಖಂಡ
ಅಂದರೆ ಸ್ಥಾನ ಮತ್ತು ಮಾನಗಳು ಕೆಲವರ ಸೊತ್ತು ಎಂದಾಯಿತು.
---------------------
ಚುನಾವಣೆ ಬರುವಾಗ ಖಾದಿ ತೊಡುವವರು ದಸರಾ ವೇಷವಿದ್ದಂತೆ - ಯು.ಟಿ. ಖಾದರ್, ಸಚಿವ
ಅಂದರೆ ಚುನಾವಣೆಯ ಸಂದರ್ಭದಲ್ಲೂ ನೀವು ಖಾದಿ ತೊಡಲು ಸಿದ್ಧರಿಲ್ಲ ಎಂದಾಯಿತು.
--------------------- 
ಆಳುವವರ ಹಾಗೂ ಗೋಪಾಲಕರ ನಿರ್ಲಕ್ಷದಿಂದಾಗಿ ದೇಶೀ ಗೋತಳಿಗಳಿಗೆ ವಿಪತ್ತು ಎದುರಾಗಿದೆ- ರಾಘವೇಶ್ವರ ಭಾರತೀ ಸ್ವಾಮೀಜಿ, ರಾಮಚಂದ್ರಾಪುರ ಮಠ
ವಿಪತ್ತು ಎದುರಾದರೆ ಏನಾಯಿತು? ಹೈಕೋರ್ಟ್‌ನಲ್ಲಿ ಜಾಮೀನು ಮಾರಾಟಕ್ಕಿರುವಾಗ.
--------------------- 
ಯಡಿಯೂರಪ್ಪರಿಗೆ ಜನ್ಮದಿನದ ಕೊಡುಗೆಯಾಗಿ ರಾಜ್ಯದಲ್ಲಿ ಬಿಜೆಪಿ ಸರಕಾರ ರಚನೆಯಾಗಬೇಕು - ಶೋಭಾ ಕರಂದ್ಲಾಜೆ, ಸಂಸದೆ
ಪರಪ್ಪನ ಅಗ್ರಹಾರ ಜೈಲನ್ನೇ ಜನ್ಮದಿನದ ಕೊಡುಗೆಯಾಗಿ ಕೊಡುವ ಸಿದ್ಧತೆ ನಡೆಯುತ್ತಿದೆ.
---------------------
ಒಮ್ಮೆ ನನಗೆ ಅಧಿಕಾರ ಕೊಡಿ, ನನ್ನ ಆಡಳಿತ ನೋಡಿ - ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ
ಕೊಟ್ಟು ಪರೀಕ್ಷಿಸುವುದಕ್ಕೆ ಅದು ಆಟದ ಸಾಮಗ್ರಿಯೇ?
---------------------
ನಮ್ಮ ದೇಶದಲ್ಲಿ ಅನೇಕ ಸಮಸ್ಯೆಗಳಿದ್ದು, ಅದನ್ನು ಪರಿಹರಿಸುವುದಕ್ಕೆ ನಮ್ಮಲ್ಲಿ 1.25 ಶತಕೋಟಿ ಜನರಿದ್ದಾರೆ - ನರೇಂದ್ರ ಮೋದಿ, ಪ್ರಧಾನಿ
ಪ್ರಧಾನಿಯ ಅಗತ್ಯವಿಲ್ಲವೆ?
--------------------- 
ನಾನು - ಈಶ್ವರಪ್ಪ ಅಣ್ಣ ತಮ್ಮಂದಿರು - ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ
ಪಾಂಡವರು-ಕೌರವರು ಎಂದರೆ ಇನ್ನೂ ಚೆನ್ನಾಗಿರುತ್ತೆ.
---------------------
ಹಿಂದೂಗಳಿಗೆ ಮೂರು ಮಕ್ಕಳಿರಬೇಕು. ಒಂದು ಧರ್ಮಕ್ಕೆ, ಒಂದು ಸೈನ್ಯಕ್ಕೆ, ಒಂದು ನಿಮಗೆ - ಕಲ್ಲಡ್ಕ ಪ್ರಭಾಕರ ಭಟ್, ಆರೆಸ್ಸೆಸ್ ನಾಯಕ
ನಿಮಗೆ ಎಷ್ಟು ಮಕ್ಕಳು ಎನ್ನುವುದರ ಕುರಿತಂತೆ ಶ್ವೇತ ಪತ್ರ ಹೊರಡಿಸಿ.
---------------------
ಬಾಡೂಟ ತಿನ್ನಿಸಿದ ಮಾತ್ರಕ್ಕೆ ಯಾರು ಬೇಕಾದರೂ ಮುಖ್ಯಮಂತ್ರಿ ಆಗಬಹುದು ಎನ್ನುವುದು ಭ್ರಮೆ - ಶ್ರೀರಾಮುಲು, ಸಂಸದ
ಮತ್ತೇನು ತಿನ್ನಿಸಬೇಕು ಹೇಳಿ.
---------------------
ನಾನು ಮತ್ತು ಯಡಿಯೂರಪ್ಪ ಹಕ್ಕ-ಬುಕ್ಕನಷ್ಟು ಮಹಾನ್ ಅಲ್ಲ, ಬಿಜೆಪಿಯ ಜೋಡೆತ್ತು ಅಷ್ಟೆ - ಅನಂತ ಕುಮಾರ್, ಕೇಂದ್ರ ಸಚಿವ
ಕಸಾಯಿಖಾನೆಯಲ್ಲಿ ಬೆಲೆಬಾಳುವ ಎತ್ತುಗಳು.
---------------------
ವಿಕಾಸದ ಉದ್ದೇಶಕ್ಕೆ ನಾವು ಎರಡು ಹೆಜ್ಜೆ ಮುಂದಿಟ್ಟರೆ ಪ್ರಧಾನಿ ಮೋದಿ ಹತ್ತು ಹೆಜ್ಜೆ ಹಾಕುತ್ತಾರೆ - ಆದಿತ್ಯನಾಥ್, ಉ.ಪ್ರ. ಮುಖ್ಯಮಂತ್ರಿ
ಆದರೆ ಹೆಜ್ಜೆ ಹಾಕುತ್ತಿರುವುದು ಹಿಂದಕ್ಕೆ ಎನ್ನುವುದು ವಿಷಾದನೀಯ.
---------------------
ಕಾಂಗ್ರೆಸ್ ಕಾರ್ಯಕರ್ತರೇ ನನ್ನ ವಾಟ್ಸ್‌ಆ್ಯಪ್, ಫೇಸ್‌ಬುಕ್ - ರಮಾನಾಥ ರೈ, ಸಚಿವ
ಅವುಗಳು ಡಿಆಕ್ಟಿವೇಟ್ ಆಗಿರಬಹುದು. ಒಮ್ಮೆ ಪರೀಕ್ಷಿಸಿ.
---------------------
ಭಾರತದ ಪ್ರಧಾನಿಯಿಂದ ನಮಗೆ ಲಾಭವಾಗುತ್ತಿಲ್ಲ - ಡೊನಾಲ್ಡ್ ಟ್ರಂಪ್, ಅಮೆರಿಕ ಅಧ್ಯಕ್ಷ
ಭಾರತೀಯರದೂ ಅದೇ ಗೋಳು.
---------------------
ರಾಜಕಾರಣದಲ್ಲಿ ಸಜ್ಜನರಿಗೆ ಕಾಲವಿಲ್ಲ - ಸಿ.ಎಂ. ಇಬ್ರಾಹೀಂ, ಮೇಲ್ಮನೆ ಸದಸ್ಯ
ಅದಕ್ಕೇ ನೀವಿನ್ನೂ ರಾಜಕಾರಣದಲ್ಲಿರುವುದು.
---------------------
ದುಷ್ಟ ನಿಗ್ರಹಕ್ಕೆ ಕಾಲ ಕೂಡಿ ಬಂದಿದೆ - ಸಿ.ಟಿ. ರವಿ, ಶಾಸಕ
ಹೌದು. ಜನರು ಸಿದ್ಧರಾಗಿದ್ದಾರೆ.
---------------------
ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದು ಯಡಿಯೂರಪ್ಪ ಮುಖ್ಯಮಂತ್ರಿಯಾಗಬೇಕು - ಕೆ.ಎಸ್. ಈಶ್ವರಪ್ಪ, ಬಿಜೆಪಿ ನಾಯಕ
ಬಿಜೆಪಿ ಅಧಿಕಾರಕ್ಕೆ ಬರದಂತೆ ತಡೆಯಲು ಭಾರೀ ಯೋಜನೆ ಹಾಕಿದಂತಿದೆ.
---------------------
ಸಂವಿಧಾನವನ್ನು ರಕ್ಷಿಸಲು ಹೋರಾಟ ಮಾಡಬೇಕಾದ ಕಾಲ ಬಂದಿದೆ - ಆಸ್ಕರ್ ಫೆರ್ನಾಂಡಿಸ್, ಕಾಂಗ್ರೆಸ್ ಮುಖಂಡ
ಹೋರಾಟ ಮಾಡಬೇಕಾದ ವಯಸ್ಸಿನಲ್ಲಿ ಮಾಡಲಿಲ್ಲ, ಇನ್ನೇನು ಮಾಡುತ್ತೀರಿ ಬಿಡಿ.
---------------------
ನಟಿ ಶ್ರೀದೇವಿಗೂ ಭೂಗತ ಪಾತಕಿ ದಾವೂದ್ ಇಬ್ರಾಹೀಂಗೂ ಅಕ್ರಮ ಸಂಬಂಧವಿತ್ತು - ಸುಬ್ರಮಣಿಯನ್‌ಸ್ವಾಮಿ, ಬಿಜೆಪಿ ನಾಯಕ
ನಿಮಗೂ ಆ ಅಕ್ರಮ ಸಂಬಂಧಕ್ಕೂ ಇದ್ದ ಸಂಬಂಧವೇನು?
--------------------- 
ರಾಜಕಾರಣ ಎಂಬುದು ನನ್ನ ರಕ್ತದಲ್ಲಿಯೇ ಇದೆ - ಪ್ರಮೋದ್ ಮಧ್ವರಾಜ್, ಸಚಿವ
ರಕ್ತದಲ್ಲಿ ಕೆಲವೊಮ್ಮೆ ರೋಗಗಳು ವಂಶವಾಹಿನಿಯಾಗಿ ಬರುವುದಿದೆ.
---------------------
ತಮಿಳುನಾಡಿನಲ್ಲಿ ಅಂಚೆ ಕಚೇರಿಗಿಂತ ಸಾರಾಯಿ ಅಂಗಡಿ ಹುಡುಕುವುದು ಸುಲಭ - ಕಮಲ್‌ಹಾಸನ್, ನಟ
ನೀವು ಯಾವುದನ್ನು ಹುಡುಕುತ್ತೀರೋ ಅದೇ ನಿಮಗೆ ದೊರಕುತ್ತದೆ 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ…
ಓ ಮೆಣಸೇ
ಓ ಮೆಣಸೇ...!
ಓ ಮೆಣಸೇ...
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...