ಮಹಾರಾಷ್ಟ್ರದ ಭಿವಂಡಿಯಲ್ಲಿ ನಿರ್ಮಾಣವಾಗಲಿದೆ ಶಿವಾಜಿ ದೇವಾಲಯ

Update: 2018-03-05 14:33 GMT

ಥಾಣೆ, ಮಾ.5: ಮಹಾರಾಷ್ಟ್ರದ ಭಿವಂಡಿ ತೆಹ್ಸಿಲ್‌ನಲ್ಲಿ ಶಿವ ಕ್ರಾಂತಿ ಪ್ರತಿಷ್ಠಾನವು ಮರಾಠ ದೊರೆ ಛತ್ರಪತಿ ಶಿವಾಜಿ ಮಹಾರಾಜರಿಗೆ ದೇವಾಲಯವನ್ನು ನಿರ್ಮಿಸಲು ನಿರ್ಧರಿಸಿದೆ. ಈ ಸಂಬಂಧ ಮಹಾರಾಷ್ಟ್ರ ಸಚಿವ ಏಕನಾಥ ಶಿಂಡೆ ರವಿವಾರದಂದು ಅಭೂತಪೂರ್ವ ಕಾರ್ಯಕ್ರಮವೊಂದನ್ನು ಆಯೋಜಿಸಿದ್ದರು ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ದೇವಾಲಯದ ನಿರ್ಮಾಣಕ್ಕಾಗಿ ಪ್ರತಿಷ್ಠಾನವು ಮರದೆಪೆಡ ಗ್ರಾಮದಲ್ಲಿ ಜಮೀನು ಖರೀದಿ

ಸಿರುವುದಾಗಿ ಪ್ರತಿಷ್ಠಾನದ ಅಧ್ಯಕ್ಷ ರಾಜಾ ಚೌಧರಿ ತಿಳಿಸಿದ್ದಾರೆ ಎಂದು ವರದಿ ಮಾಡಲಾಗಿದೆ. ಐತಿಹಾಸಿಕ ವಜ್ರೇಶ್ವರಿ ದೇವಸ್ಥಾನದ ಬಳಿ ತಲೆಯೆತ್ತಲಿರುವ ಶಿವಾಜಿ ದೇವಾಲಯವು ಯುವಜನತೆಗೆ ಸ್ಫೂರ್ತಿಯ ಧಾಮವಾಗಲಿದೆ ಎಂದು ಶಿಂಡೆ ತಿಳಿಸಿದ್ದಾರೆ.

ಮಹಾರಾಷ್ಟ್ರ ಸರಕಾರದ ಪ್ರಕಾರ ಮರಾಠ ಸಾಮ್ರಾಜ್ಯವನ್ನು ಸ್ಥಾಪಿಸಿದ ಶಿವಾಜಿ 1630ರ ಫೆಬ್ರವರಿ 19ರಂದು ಪುಣೆಯ ಶಿವನೆರಿ ಕೋಟೆಯಲ್ಲಿ ಜನಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News