ಮೈಸೂರು: ನಾಲ್ವರು ಮನೆಗಳ್ಳರ ಬಂಧನ; 340 ಗ್ರಾಂ ಚಿನ್ನಾಭರಣ ವಶ
ಮೈಸೂರು,ಮಾ.6: ಮನೆಗಳ್ಳತನ ಮಾಡುತ್ತಿದ್ದ ಕಳ್ಳರನ್ನು ಬಂಧಿಸಿರುವ ವಿದ್ಯಾರಣ್ಯಪುರಂ ಪೊಲೀಸರು ಕಳ್ಳರಿಂದ ಅಂದಾಜು 10 ಲಕ್ಷ ರೂ. ಮೌಲ್ಯದ 340 ಗ್ರಾಂ ಚಿನ್ನಾಭರಣ, ಲ್ಯಾಪ್ ಟಾಪ್, 2 ಮೊಬೈಲ್ ಗಳನ್ನು ವಶಪಡಿಸಿಕೊಂಡಿದ್ದಾರೆ.
ಶ್ರೀಕಾಂತ್, ವಿಜೇಂದ್ರ, ಗೌತಮ್ ಮತ್ತು ಪ್ರಜ್ವಲ್ ಬಂಧಿತ ಆರೋಪಿಗಳು. ಕಳ್ಳರು ವಿದ್ಯಾರಣ್ಯಪುರಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜ.26 ರಂದು ರಾತ್ರಿ ಜೆ.ಪಿ.ನಗರದ ಮನೆಯೊಂದರಲ್ಲಿ 340 ಗ್ರಾಂ ಚಿನ್ನಭಾರಣ, ಒಂದು ಲ್ಯಾಪ್ ಟಾಪ್ ಮತ್ತು 2 ಮೊಬೈಲ್ ಗಳನ್ನು ದೋಚಿ ಪರಾರಿಯಾಗಿದ್ದರು.
ನಗರ ಪೊಲೀಸ್ ಆಯುಕ್ತರಾದ ಡಾ.ಸುಬ್ರಮಣ್ಯೇಶ್ವರರಾವ್, ಉಪ ಪೊಲೀಸ್ ಆಯುಕ್ತರಾದ ವಿಷ್ಣುವರ್ಧನ್, ಡಿಸಿಪಿ ವಿಕ್ರಮ್ ಅಮಟೆ ಅವರ ಮಾರ್ಗದರ್ಶನದಲ್ಲಿ ಸಹಾಯಕ ಪೊಲೀಸ್ ಆಯುಕ್ತರಾದ ಎಂ.ಎನ್.ಧರ್ಮಪ್ಪ ಅವರ ನೇತೃತ್ವದಲ್ಲಿ ವಿದ್ಯಾರಣ್ಯಪುರಂ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ ಜಿ.ಓಂಕಾರಪ್ಪ, ಎಎಸ್‍ಐ ಶಾಂತಕುಮಾರ್, ಸಿಬ್ಬಂದಿಗಳಾದ ನಟರಾಜು, ಮಹೇಶ್ವರ, ಮಂಜುನಾಥ, ಶಿವಶಂಕರ್, ಉಮೇಶ್, ರಾಧೇಶ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.