×
Ad

ಹನೂರು: ಸುತ್ತುಗೋಡೆ ನಿರ್ಮಾಣ ಕಾಮಗಾರಿಗೆ ಶಾಸಕರಿಂದ ಶಿಲಾನ್ಯಾಸ

Update: 2018-03-06 22:27 IST

ಹನೂರು,ಮಾ.6 :ಸಮೀಪದ ಬೆಳತ್ತೂರು ಗ್ರಾಮದ ಮಹಾಲಿಂಗೇಶ್ವರ ದೇಗುಲದ ಸುತ್ತುಗೋಡೆ ನಿರ್ಮಾಣ ಕಾಮಗಾರಿಗೆ ಶಾಸಕ ಆರ್. ನರೇಂದ್ರ ಮಂಗಳವಾರ ಶಿಲಾನ್ಯಾಸ ನೆರವೇರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಗ್ರಾಮದ ಮಹಾಲಿಂಗೇಶ್ವರ ದೇಗುಲವು ಪುರಾತನವಾದದ್ದು, ಆದರೆ ದೇಗುಲವು ಶಿಥಿಲಾವಸ್ಥೆ ಹಂತ ತಲುಪಿತ್ತು. ಈ ದಿಸೆಯಲ್ಲಿ ಗ್ರಾಮಸ್ಥರು ಹೆಚ್ಚಿನ ಒಲವು ತೋರಿ ದೇಗುಲವನ್ನು ನವೀಕರಣಗೊಳಿಸಿದ್ದರು. ಆದರೆ ಸುತ್ತುಗೋಡೆ ವ್ಯವಸ್ಥೆ ಇರಲಿಲ್ಲ. ಸುತ್ತುಗೋಡೆ ನಿರ್ಮಿಸಿಕೊಡುವಂತೆ ಗ್ರಾಮಸ್ಥರು ಮನವಿ ಮಾಡಿದ್ದರು. ಈ ದಿಸೆಯಲ್ಲಿ ಗ್ರಾಮ ವಿಕಾಸ ಯೋಜನೆಯಡಿ 9 ಲಕ್ಷ ರೂ ಅನುದಾನದಲ್ಲಿ ಸುತ್ತುಗೋಡೆ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಲಾಗುತ್ತಿದೆ. ದೇಗುಲದ ಅಭಿವೃದ್ಧಿ ಕಾರ್ಯಕ್ಕೆ ಸಂಬಂಧಿಸಿದಂತೆ ಮುಂದಿನ ದಿನಗಳ ಇನ್ನಷ್ಟು ಅನುದಾನವನ್ನು ನೀಡಲಾಗುವುದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಜಿಪಂ ಸದಸ್ಯರಾದ ಮರಗದಮಣಿ, ತಾಪಂ ಅಧ್ಯಕ್ಷ ಆರ್.ರಾಜು, ಸದಸ್ಯೆ ರುಕ್ಮಿಣಿ, ಲೊಕ್ಕನಹಳ್ಳಿ ಗ್ರಾಪಂ ಅಧ್ಯಕ್ಷ ರಂಗಸ್ವಾಮಿ, ಚಿಕ್ಕಮಾಲಾಪುರ ಪಿಡಿಒ ಮಾದೇಶ್, ಮುಖಂಡರಾದ ದೊರೆಸ್ವಾಮಿನಾಯ್ಡು, ಚಿಕ್ಕತಮ್ಮಯ್ಯ, ಸಿದ್ದರಾಜು, ದೊಡ್ಡಶೆಟ್ಟಿ, ರವಿ ಹಾಗೂ ಇನ್ನಿತರರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News