ಬೀರೂರು: ಪಿಕಪ್ ವಾಹನ- ಟ್ರಕ್ ಢಿಕ್ಕಿ: ಓರ್ವ ಮೃತ್ಯು
Update: 2018-03-08 18:57 IST
ಬೀರೂರು, ಮಾ.8 ಇಲ್ಲಿಗೆ ಸಮೀದ ಚಟ್ನಳ್ಳಿ ಗ್ರಾಮದ ಲಂಬಾಣಿ ತಾಂಡ್ಯದ ಬಳಿ ಅಶೋಕ್ ಲೈಲ್ಯಾಂಡ್ ಪಿಕಪ್ ಹಾಗೂ ಟ್ರಕ್ ನಡುವೆ ಸಂಭವಿಸಿದ ಮುಖಾಮುಖಿ ಢಿಕ್ಕಿ ಅಪಘಾತದಲ್ಲಿ ಟ್ರಕ್ ಚಾಲಕ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಗುರುವಾರ ವರದಿಯಾಗಿದೆ.
ಶಿವಮೊಗ್ಗದಿಂದ ಕಡೂರು ತಾಲೂಕಿನ ಬೀರೂರಿಗೆ ಎಳನೀರು ಸಾಗಿಸುತ್ತಿದ್ದ ಪಿಕಪ್ ವಾಹನವು ಶಿವಮೊಗ್ಗಕ್ಕೆ ಎಂ.ಸ್ಯಾಂಡ್ ಸಾಗಿಸುತ್ತಿದ್ದ ಟ್ರಕ್‍ಗೆ ಢಿಕ್ಕಿ ಹೊಡೆದ ಪರಿಣಾಮ ಪಿಕಪ್ ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾನೆಂದು ತಿಳಿದು ಬಂದಿದ್ದು, ಚಾಲಕನ ಗುರುತು ಪತ್ತೆಯತಾಗಿಲ್ಲ.
ಘಟನೆಯಲ್ಲಿ ಟ್ರಕ್ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದು, ಪಿಕಪ್‍ನಲ್ಲಿದ್ದ ಮತ್ತೊಬ್ಬ ವ್ಯಕ್ತಿ ತೀವ್ರವಾಗಿ ಗಾಯಗೊಂಡಿದ್ದಾನೆ. ಗಾಯಾಳುವನ್ನು ತರೀಕೆರೆ ತಾಲೂಕಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.
ಘಟನಾ ಸ್ಥಳಕ್ಕೆ ಬೀರೂರು ಠಾಣೆ ಪೊಲೀಸರು ಭೇಟಿ ನೀಡಿ ಸ್ಥಳ ಪರಿಶೀಲಿಸಿ ದೂರು ದಾಖಲಿಸಿಕೊಂಡಿದ್ದಾರೆ.