ದಾವಣಗೆರೆ: ತ್ರಿಪುರಾದಲ್ಲಿನ ಸಿಪಿಐಎಂ, ಎಡ ಸಂಘಟನೆಗಳ ಮೇಲಿನ ದಾಳಿ ಖಂಡಿಸಿ ಪ್ರತಿಭಟನೆ

Update: 2018-03-08 13:36 GMT

ದಾವಣಗೆರೆ,ಮಾ.8: ತ್ರಿಪುರಾದಲ್ಲಿ ಸಿಪಿಐಎಂ ಇತರೆ ಪಕ್ಷಗಳು, ಎಡ ಸಂಘಟನೆಗಳ ಮೇಲಿನ ದಾಳಿ ಖಂಡಿಸಿ ಸಿಪಿಐಎಂ, ಸಿಪಿಐ, ಸುಸಿ ಸಂಘಟನೆ ನೇತೃತ್ವದಲ್ಲಿ ನಗರದಲ್ಲಿ ಗುರುವಾರ ಪ್ರತಿಭಟನೆ ನಡೆಸಲಾಯಿತು. 

ನಗರದ ಶ್ರೀ ಜಯದೇವ ವೃತ್ತದಿಂದ ಆರಂಭಗೊಂಡ ಪ್ರತಿಭಟನಾ ಮೆರವಣಿಗೆ ಹಳೆ ಪಿ.ಬಿ.ರಸ್ತೆ ಮಾರ್ಗವಾಗಿ ಎಡ ಪಕ್ಷ, ಎಡ ಸಂಘಟನೆಗಳ ಮೇಲಿನ ದೌರ್ಜನ್ಯ ಖಂಡಿಸಿ ಘೋಷಣೆ ಕೂಗುತ್ತಾ ಉಪ ವಿಭಾಗಾಧಿಕಾರಿ ಕಚೇರಿಗೆ ತೆರಳಿ, ಎಸಿ ಮುಖಾಂತರ ರಾಷ್ಟ್ರಪತಿಗೆ ಮನವಿ ಅರ್ಪಿಸಲಾಯಿತು. 

ಈ ಸಂದರ್ಭ ಮಾತನಾಡಿದ ಸಿಪಿಐ, ಸಿಪಿಐಎಂ ಮುಖಂಡರು, ತ್ರಿಪುರದಲ್ಲಿ ಎಡ ಪಕ್ಷ, ಎಡ ಸಂಘಟನೆಗಳ ಮೇಲೆ ಬಿಜೆಪಿ ಮತ್ತದರ ಮಿತ್ರ ಪಕ್ಷ ನಡೆಸುತ್ತಿರುವ ದಾಳಿ ಖಂಡನೀಯವಾಗಿದ್ದು, ಅಲ್ಲಿನ ವಿಧಾನಸಭೆ ಚುನಾವಣೆಯಲ್ಲಿ ಗೆದ್ದ ನಂತರ ಅಟ್ಟಹಾಸ ಹೆಚ್ಚಾಗಿದೆ ಎಂದ ಅವರು, ಬಿಜೆಪಿ ಮತ್ತು ಐಪಿಎಫ್‍ಟಿ ನೇತೃತ್ವದಲ್ಲಿ ಸಿಪಿಐಎಂ, ಎಡ ಪಕ್ಷ, ಎಡ ಸಂಘಟನೆಗಳ ಮೇಲೆ ವ್ಯಾಪಕ ದಾಳಿ, ಹಲ್ಲೆ ನಡೆಸಲಾಗುತ್ತಿದೆ ಎಂದು ದೂರಿದರು.

ಪ್ರತಿಭಟನೆಯಲ್ಲಿ ಎಡ ಪಕ್ಷಗಳ ಮುಖಂಡರಾದ ಎಚ್.ಕೆ. ರಾಮಚಂದ್ರಪ್ಪ, ಕೆ.ಎಲ್. ಭಟ್, ಜಿಪಂ ಸದಸ್ಯ ತೇಜಸ್ವಿ ವಿ. ಪಟೇಲ್, ಆನಂದರಾಜ್, ಆವರಗೆರೆ ಎಚ್.ಜಿ. ಉಮೇಶ, ಆನಂದರಾಜ, ಆವರಗೆರೆ ಚಂದ್ರು, ಆವರಗೆರೆ ವಾಸು, ಲೋಕಿಕೆರೆ ಅಂಜಿನಪ್ಪ, ಟಿ.ವಿ. ರೇಣುಕಮ್ಮ, ಮಂಜುನಾಥ ಕೈದಾಳೆ, ಮಂಜುನಾಥ ಕುಕ್ಕವಾಡ, ಈ.ಶ್ರೀನಿವಾಸ, ಶ್ರೀನಿವಾಸಮೂರ್ತಿ, ಐರಣಿ ಚಂದ್ರು, ಉಮಾಪತಿ ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News