ಕೊಳ್ಳೇಗಾಲ: ಕಳ್ಳನ ಬಂಧನ; ಅಪಾರ ಸೊತ್ತು ವಶ

Update: 2018-03-08 13:40 GMT

ಕೊಳ್ಳೇಗಾಲ, ಮಾ.08 : ಕಾಲೇಜಿನಲ್ಲಿ ಓದುವ ಶ್ರೀಮಂತರ ಮಕ್ಕಳನ್ನು ಹೆದರಿಸಿ, ಬೆದರಿಸಿ ಅಪಹರಿಸಿ ಹಣ ಮತ್ತು ಚಿನ್ನದ ಒಡವೆಗಳನ್ನು ತರಿಸಿಕೊಂಡು ಅಪಹರಣ ಮಾಡುತ್ತಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಪಟ್ಟಣದ ಸಾಮಂದಗೇರಿ ವಾಸಿ ಅಬ್ದುಲ್ ರಹೀಂ ನಟ್ಕಾ, ಬಂದಿತ ಆರೋಪಿ. ಪ್ರಕರಣಕ್ಕೆ ಸಂಬಂಧಪಟ್ಟ ಆರೋಪಿ ಜುವೇರ್ ತಲೆಮರೆಸಿಕೊಂಡಿದ್ದಾನೆ.

ಪೊಲೀಸ್ ಅಧೀಕ್ಷಕ ಧರ್ಮೇಂದ್ರಕುಮಾರ್ ಮೀನಾ ಎಎಸ್‍ಪಿ ಗೀತಾ ಪ್ರಸನ್ನ ಅವರ ಮಾರ್ಗದರ್ಶನದಲ್ಲಿ ಡಿ.ವೈ.ಎಸ್.ಪಿ ಪುಟ್ಟಮಾದಯ್ಯ, ಅಪರಾಧ ಪತ್ತೇದಳ ಅಧಿಕಾರಿ ಡಿ.ಜಿ. ರಾಜಣ್ಣ, ಪಟ್ಟಣ ಠಾಣೆ ಸಬ್‍ಇನ್‍ಸ್ಪೆಕ್ಟರ್ ವಿಣಾನಾಯಕ್ ಹಾಗೂ ಸಿಬ್ಬಂದಿಗಳ ಜಂಟಿ ಕಾರ್ಯಾಚರಣೆಯಲ್ಲಿ ಅಪರಾಧಿಯನ್ನು ಬಂದಿಸಿದ್ದು, ಆತನಿಂದ 165 ಗ್ರಾಂ ಚಿನ್ನದ ಒಡವೆಗಳು, ಒಂದು ಕಾರು, ಒಂದು ಮೋಟಾರ್ ಬೈಕ್ ಸೇರಿದಂತೆ ರೂ.4,64,000 ಮೌಲ್ಯದ ಮಾಲುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಆರೋಪಿಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿ ನ್ಯಾಯಾಧೀಶರು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ನೀಡಿದ್ದಾರೆ. ಕಾನೂನು ಸಂಘರ್ಷಕ್ಕೆ ಒಳಗಾದ ಬಾಲ ಅಪರಾಧಿಯನ್ನು ಮೈಸೂರಿನ ಬಾಲಮಂದಿರಕ್ಕೆ ಕಳುಸಿರುವುದಾಗಿ ಪೊಲೀಸ್ ಅಧೀಕ್ಷಕರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News