×
Ad

ಜೈಲಿಗೆ ಹೋಗುತ್ತೇನೆಂದು ಹೆದರಿದ ಸಿದ್ದರಾಮಯ್ಯ ಲೋಕಾಯುಕ್ತವನ್ನೇ ಮುಚ್ಚಿದರು: ಎಚ್.ವಿಶ್ವನಾಥ್

Update: 2018-03-08 22:21 IST

ಮೈಸೂರು,ಮಾ.8: ಜೈಲಿಗೆ ಹೋಗುತ್ತೆನೆಂದು ಹೆದರಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಲೋಕಾಯುಕ್ತವನ್ನೇ ಮುಚ್ಚಲು ಕಾರಣರಾದರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಮಾಜಿ ಸಂಸದ, ಹುಣಸೂರು ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಎಚ್.ವಿಶ್ವನಾಥ್ ವಾಗ್ದಾಳಿ ನಡೆಸಿದರು.

ಮೈಸೂರಿನ ಖಾಸಗಿ ಹೋಟೆಲ್ ನಲ್ಲಿ ಗುರುವಾರ ಸುದ್ದಿಗೋಷ್ಠಿ ನಡೆಸಿದ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಗುಡುಗಿದ್ದಾರೆ. ಲೋಕಾಯುಕ್ತ ಮುಚ್ಚಿಹಾಕಲು ಕಾರಣ ಸಿದ್ದರಾಮಯ್ಯ ಮಾಡಿರುವ ಭ್ರಷ್ಟಾಚಾರ. ಸಿದ್ದರಾಮಯ್ಯ ಜೈಲಿಗೆ ಹೋಗುತ್ತೇನೆಂದು ಹೆದರಿ ಲೋಕಾಯುಕ್ತ ಮುಚ್ಚಿ ಹಾಕಿದರು. ಲೋಕಾಯುಕ್ತ ಬದಲಿಗೆ ಹಲ್ಲಿಲ್ಲದ ಹಾವಿನಂತ ಎಸಿಬಿಯನ್ನು ತಂದರು. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಕಾನೂನು ಸುವ್ಯವಸ್ಥೆ ಹಾಳಾಗಿದೆ. ಬಲಿಷ್ಠವಾದ ಲೋಕಾಯುಕ್ತ ಹಾಳು ಮಾಡಿದ ಕೀರ್ತಿ ಸಿದ್ದರಾಮಯ್ಯನವರಿಗೆ ಸಲ್ಲುತ್ತದೆ. ಲೋಕಾಯುಕ್ತ ಕಚೇರಿಯಲ್ಲಿ ನ್ಯಾಯಾಧೀಶರ ಮೇಲೆ ನಡೆದ ಹಲ್ಲೆಯನ್ನು ನಾನು ಖಂಡಿಸುತ್ತೇನೆ. ಲೋಕಾ ನ್ಯಾಯಾಧೀಶ ವಿಶ್ವನಾಥ್ ಶೆಟ್ಟಿ ಮೇಲೆ ನಡೆದ ಹಲ್ಲೆಗೆ ಕಾಂಗ್ರೆಸ್ ಸರ್ಕಾರವೇ ನೇರ ಹೊಣೆ. ಗೃಹ ಮಂತ್ರಿ ರಾಮಲಿಂಗಾರೆಡ್ಡಿ ಕೂಡ ಇದಕ್ಕೆ ಹೊಣೆ  ಎಂದು ಆರೋಪಿಸಿದರು. 

ನಿಮ್ಮ ಮನಸ್ಥಿತಿಯಲ್ಲಿ ನಿಮಗೆ ದ್ವೇಷ ಇದೆ, ವೈರಾಗ್ಯ ಇದೆ ಎಂದು ತಿಳಿಯುತ್ತದೆ. ತಾವೇ ನೈಸ್ ಹಗರಣದ ಭ್ರಷ್ಟ ಅಂತ ವರದಿ ನೀಡಿ ಈಗ ಅಶೋಕ್ ಖೇಣಿಯನ್ನು ಕಾಂಗ್ರೆಸ್ ಗೆ ಸೇರಿಸಿಕೊಂಡಿದ್ದಾರೆ. 330 ಕೀಮಿ ಕಾಲ್ನಡಿಗೆ ಶೋಕಿಗೆ ಮಾಡಿದ್ದಾ? ಭ್ರಷ್ಟಾಚಾರದಲ್ಲಿ ತೊಡಗಿದವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೋಳ್ಳೋದಿಕ್ಕಾ ಎಂದು ಪ್ರಶ್ನಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಜೆಡಿಎಸ್ ಮುಖಂಡರಾದ ಸೋಮಶೇಖರ್, ಅಶೋಕಪುರಂ ರೇವಣ್ಣ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಲೆನಿನ್, ಪೆರಿಯಾರ್, ಅಂಬೇಡ್ಕರ್ ಅವರ ವಿಗ್ರಗಹಗಳನ್ನು ಹಾಳು ಮಾಡುವುದು ತಪ್ಪು. ದಾರ್ಶನಿಕ, ಹೋರಾಟಗಾರರ ಪ್ರತಿಮೆಗಳನ್ನು ಹಾಳು ಮಾಡಬಹುದು. ಆದರೆ ಅವರ ಸಿದ್ಧಾಂತಗಳನ್ನು ಯಾರಿಂದಲೂ ಹಾಳುಮಾಡಕಾಗಲ್ಲ. 
-ಎಚ್.ವಿಶ್ವನಾಥ್, ಮಾಜಿ ಸಂಸದ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News