×
Ad

ಗುಂಡ್ಲುಪೇಟೆ: ಕೃಷಿಪತ್ತಿನ ಸಹಕಾರ ಬ್ಯಾಂಕ್‍ ವತಿಯಿಂದ ರೈತರಿಗೆ ಟ್ರ್ಯಾಕ್ಟರ್ ವಿತರಣೆ

Update: 2018-03-08 22:33 IST

ಗುಂಡ್ಲುಪೇಟೆ,ಮಾ.8: ತಾಲೂಕಿನ ಮೂಡಗೂರು ಗ್ರಾಮದ ಕೃಷಿಪತ್ತಿನ ಸಹಕಾರ ಬ್ಯಾಂಕ್‍ ವತಿಯಿಂದ ರೈತರಿಗೆ ಟ್ರ್ಯಾಕ್ಟರ್ ಗಳನ್ನು ವಿತರಿಸಲಾಯಿತು. 

ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಸಹಕಾರ ಬ್ಯಾಂಕ್‍ನ ಅಧ್ಯಕ್ಷ ಎಸ್.ಚಂದ್ರಶೇಖರ್ ಟ್ರ್ಯಾಕ್ಟರ್ ಗಳನ್ನು ವಿತರಿಸಿ ಮಾತನಾಡಿ, ರೈತರಿಗೆ 48 ಲಕ್ಷದ 48 ಸಾವಿರ ರೂ ವೆಚ್ಛದಲ್ಲಿ ಈಗ 8 ಟ್ರ್ಯಾಕ್ಟರ್ ಗಳನ್ನು ವಿತರಿಸಲಾಗುತ್ತಿದೆ. ಈ ಸೌಲಭ್ಯವನ್ನು ರೈತರು ಸದುಪಯೋಗಪಡಿಸಿಕೊಂಡು ಬ್ಯಾಂಕಿನಿಂದ ಪಡೆದ ಸಾಲವನ್ನು ಸಕಾಲದಲ್ಲಿ ಹಿಂತಿರುಗಿಸುವ ಮೂಲಕ ಬ್ಯಾಂಕ್‍ನ ಜೊತೆ ಸಹಕರಿಸಬೆಕೆಂದು ತಿಳಿಸಿದರು. 

ಈ ಸಂದರ್ಭದಲ್ಲಿ ಜಿಲ್ಲಾ ಬ್ಯಾಂಕ್‍ನ ನಿರ್ದೇಶಕರಾದ ಎಂ.ಪಿ.ಸುನಿಲ್, ಶಿವಶಂಕರಮೂರ್ತಿ, ಎಂಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ರಮೇಶ್, ಶಾಂತಮೂರ್ತಿ ಸೇರಿದಂತೆ ಹಲವರು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News