ಗುಂಡ್ಲುಪೇಟೆ: ತಳ್ಳುಗಾಡಿಗೆ ಆಟೋ ಢಿಕ್ಕಿ; ವ್ಯಾಪಾರಿ ಮೃತ್ಯು
Update: 2018-03-08 22:35 IST
ಗುಂಡ್ಲುಪೇಟೆ,ಮಾ.8: ನಸುಕಿನಲ್ಲಿ ತರಕಾರಿ ಹಾಗೂ ಸೊಪ್ಪುತುಂಬಿಸಿಕೊಂಡು ತಾಲೂಕಿನ ತೆರಕಣಾಂಬಿ ಸಂತೆಗೆ ಹೋಗುತ್ತಿದ್ದ ತಳ್ಳುಗಾಡಿಗೆ ಆಟೋ ಢಿಕ್ಕಿಹೊಡೆದು ವ್ಯಾಪಾರಿಯೊರ್ವರು ಮೃತಪಟ್ಟಿದ್ದಾರೆ.
ಗ್ರಾಮದ ಬಸವೇಗೌಡ(65) ತಮ್ಮ ತಳ್ಳುಗಾಡಿಯಲ್ಲಿ ತರಕಾರಿ ಹಾಗೂ ಸೊಪ್ಪುಗಳನ್ನು ತುಂಬಿಕೊಂಡು ನಸುಕಿನಲ್ಲಿ ಸಂತೆಯತ್ತ ತೆರಳುತ್ತಿದ್ದಾಗ ಆಟೋ ಢಿಕ್ಕಿಹೊಡೆದಿದೆ.
ಕೂಡಲೇ ಗಾಯಾಳುವನ್ನು ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಕರೆದೊಯ್ಯುವಾಗ ಮೃತಪಟ್ಟಿದ್ದಾರೆ. ಈ ಬಗ್ಗೆ ತೆರಕಣಾಂಬಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.