ಬೇಟೆಗಾರರ ಗುಂಡಿಗೆ ಕಾಡುಕೋಣ ಬಲಿ : ಬೆಟ್ಟಗೇರಿ ಮಠದಕಾಡು ಬಳಿ ಘಟನೆ
Update: 2018-03-09 20:12 IST
ಮಡಿಕೇರಿ,ಮಾ.9 :ಬೇಟೆಗಾರರ ಗುಂಡಿಗೆ ಸಿಲುಕಿ 9 ವರ್ಷದ ಗಂಡು ಕಾಡುಕೋಣವೊಂದು ಪ್ರಾಣ ತೆತ್ತಿರುವ ಘಟನೆ ವರದಿಯಾಗಿದೆ.
ಅಂಜನಗೇರಿ ಬೆಟ್ಟಗೇರಿ ವ್ಯಾಪ್ತಿಯ ಮಠದಕಾಡು ಬಳಿ ಆಹಾರ ಅರಿಸಿ ಬಂದಿದ್ದ ಕಾಡುಕೋಣಕ್ಕೆ ಮಾ.8 ರ ಸಂಜೆ ಬೇಟೆಗಾರರು ಗುಂಡಿಕ್ಕಿದ್ದು, ಗಾಯಗೊಂಡಿದ್ದ ಕಾಡುಕೋಣವು ಮಹೇಂದ್ರ ಎಂಬವರ ತೋಟದ ರಸ್ತೆ ಬದಿಯಲ್ಲಿ ಬಿದ್ದು ಸಾವನ್ನಪ್ಪಿದೆ.
ಈ ಬಗ್ಗೆ ಮಾಹಿತಿ ತಿಳಿದ ಎ.ಸಿ.ಎಫ್. ಚಿಣ್ಣಪ್ಪ, ವಲಯ ಅರಣ್ಯಾಧಿಕಾರಿ ಅರುಣ್, ಉಪ ವಲಯ ಅರಣ್ಯಾಧಿಕಾರಿ ಅನಿಲ್ ಡಿಸೋಜ, ಅರಣ್ಯ ರಕ್ಷಕರಾದ ಮಂಜೇಗೌಡ, ಪೂಣಚ್ಚ ಹಾಗೂ ಸಿಬ್ಬಂದಿಗಳು ಮತ್ತು ವೈಡ್‍ಲೈಫ್ ವೈದ್ಯಾಧಿಕಾರಿ ಮುಜೀಪ್ ಆಗಮಿಸಿ ಮರಣೋತ್ತರ ಪರೀಕ್ಷೆ ನಡೆಸಿದರು.
ಸ್ಥಳ ಮಹಜರು ನಡೆಸಿ ನ್ಯಾಯಲಯಕ್ಕೆ ವರದಿ ಸಲ್ಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದೆಂದು ಎಸಿಎಫ್ ಚಿಣ್ಪಪ್ಪ ತಿಳಿಸಿದ್ದಾರೆ.