ರಾಜಾಸೀಟು ಉದ್ಯಾನವನದಲ್ಲಿ ವರ್ಣರಂಜಿತ ಪುಷ್ಪರಾಶಿಯ ಆಕರ್ಷಣೆ : ಮೂರು ದಿನಗಳ ಫಲಪುಷ್ಪ ಪ್ರದರ್ಶನಕ್ಕೆ ಚಾಲನೆ

Update: 2018-03-09 15:34 GMT

ಮಡಿಕೇರಿ,ಮಾ.9 :ಜಿಲ್ಲಾಡಳಿತ ಜಿಲ್ಲಾ ಪಂಚಾಯತ್ ಹಾಗೂ ತೋಟಗಾರಿಕೆ ಇಲಾಖೆ ವತಿಯಿಂದ ರಾಜಾಸೀಟು ಉದ್ಯಾನವನದಲ್ಲಿ ಏರ್ಪಡಿಸಿರುವ ಫಲಪುಷ್ಪ ಪ್ರದರ್ಶನ ನೋಡುಗರ ಗಮನ ಸೆಳೆಯುತ್ತಿದೆ. ತರಕಾರಿ ಹಣ್ಣುಗಳಲ್ಲಿ ಕೆತ್ತನೆ ಮಾಡಿದ ಕಲಾಕೃತಿಗಳು ಆಕರ್ಷಿಸುತ್ತಿವೆ.
ಮಹಾತ್ಮ ಗಾಂಧಿ, ಡಾ.ಬಿ.ಅರ್. ಅಂಬೇಡ್ಕರ್, ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ, ಜನರಲ್ ತಿಮ್ಮಯ್ಯ ಸುಭಾಷ್ ಚಂದ್ರಬೋಷ್, ಸ್ವಾಮಿ ವಿವೇಕಾನಂದ, ಚಂದ್ರಶೇಖರ್ ರಾಜ, ಸಂಗ್ಗೊಳ್ಳಿ ರಾಯಣ್ಣ, ಪ್ರಧಾನ ಮಂತ್ರಿ ನರೇಂದ್ರ ಮೋದಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಹೀಗೆ ನಾನಾ ಕಲಾಕೃತಿಗಳು, ಹಣ್ಣುಗಳಿಂದ ಮಾಡಿದ ವಿವಿಧ ರೀತಿಯ ಹೂವುಗಳು ಅತ್ಯಾಕರ್ಷಣಿಯವಾಗಿದೆ.

ರಾಷ್ಟ್ರಕವಿ ಕುವೆಂಪು ಅವರ ಕವಿ ಶೈಲದಲ್ಲಿ ಕವನ ಬರೆಯುವ ಮಾದರಿ ಸಾಹಿತ್ಯ ಲೋಕವನ್ನು ಬಿಂಬಿಸುತ್ತಿದೆ. ನಗರದ ಕೋಟೆ ಕಲಾಕೃತಿ ಕಾವೇರಿ ಮಾತೆ ಹಾಗೂ ಮಂಟಪ ತೀರ್ಥೋದ್ಭವ ಕುಂಡಿಕೆ ಪಾಲಿಹೌಸ್ ನೆರಳು ಪರದೆ ಮನೆ, ಕಿಚನ್ ಗಾರ್ಡನ್, ಟೆರಸ್ ಗಾರ್ಡನ್, ವರ್ಟಿಕಲ್ ಗಾರ್ಡನ್ ಇತ್ತಿತರ ಫಲಪುಷ್ಪ ಪ್ರದರ್ಶನಗಳು ಜನಮನ ಸೆಳೆಯುತ್ತಿವೆ. ಆನೆ, ಜಿಂಕೆ, ಹುಲಿ ,ಮೊಲ, ಚಿಟ್ಟೆ ಕಲಾಕೃತಿಗಳನ್ನು ಹೂವು ಅಲಂಕಾರಿಕ ಎಲೆಗಳಿಂದ ನಿರ್ಮಿಸಲಾಗಿದೆ.

ಮಕ್ಕಳಿಗೆ ಮನರಂಜನೆ ನೀಡುವ ಸೈಕಲ್, ಪಾರ್ಮುಲ ಕಾರು ಮಾದರಿ ಗಮನ ಸೆಳೆಯುತ್ತಿವೆ. ಮಾವು, ಕಿತ್ತಳೆ, ಅನಾನಾಸ್ ಹಣ್ಣುಗಳು ಪೋಟೋ ಪ್ರಮ್‍ಗಳ ಮಾದರಿ ಗಮನ ಸೆಳೆಯುತ್ತಿವೆ.  ಫಲಪುಷ್ಪ ಪ್ರದರ್ಶನದ ಅಂಗವಾಗಿ ಈಗಾಗಲೇ ರಾಜಾಸೀಟು ಉದ್ಯಾನವನದಲ್ಲಿ 3000-4000 ಸಂಖ್ಯೆಯ ವಿವಿಧ ಜಾತಿಯ ಹೂವುಗಳಾದ ಪೇಟೋನಿಯ, ಕ್ಯಾನ, ಸಾಲ್ವಿಯ, ಸೇವಂತಿಗೆ, ಗಾಂಪ್ರಿನಾ, ಕಾಕಡ ಮಲ್ಲಿಗೆ, ಚಂಡುಹೂ, ಪ್ಲಾಕ್ಸ್, ಜೀನಿಯಾ, ಜರೇನಿಯಂ, ವಿಂಕಾ ರೋಸಿಯಾ, ಇತ್ಯಾದಿಗಳನ್ನು ಪಾತಿಯಲ್ಲಿ ನಾಟಿ ಮಾಡಲಾಗಿದೆ ಹಾಗೂ 1500 ಕುಂಡಗಳಲ್ಲಿ ವಿವಿಧ ಜಾತಿಯ ಹೂವುಗಳನ್ನು ಬೆಳೆಸಲಾಗಿದೆ.

ಹಾಗೆಯೇ ನಗರದ ಗಾಂಧೀ ಮೈದಾನದಲ್ಲಿ ಕೃಷಿ ತೋಟಗಾರಿಕೆ, ಪಾಶುಪಾಲನೆ, ಮೀನುಗಾರಿಕೆ ಹೀಗೆ ನಾನಾ ಇಲಾಖೆಗಳ ವಸ್ತು ಪ್ರದರ್ಶನಗಳ ಮಳೆಗೆ ನಿರ್ಮಿಸಲಾಗಿದೆ.

ಫಲಪುಷ್ಪ ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದ ಶಾಸಕರಾದ ಎಂ.ಪಿ. ಅಪ್ಪಚ್ಚು ರಂಜನ್ ಅವರು ಕಳೆದ ಬಾರಿಗಿಂತ ಈ ಬಾರಿ ಫಲಪುಷ್ಪ ಪ್ರದರ್ಶನ ಅಕರ್ಷಣಿಯವಾಗಿದೆ ಎಂದು ಅವರು ಹೇಳಿದರು ಕೊಡಗಿನ ಸಂಸ್ಕೃತಿ ಬಿಂಬಿಸುವ ಕಲಾಕೃತಿಗಳ ರಚನೆ ಆಕರ್ಷಣೀಯವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕೊಡಗು ಜಿಲ್ಲೆಗೆ ಪ್ರವಾಸಿಗರು ಇಲ್ಲಿನ ಆಚಾರ ವಿಚಾರ, ಸಂಸ್ಕೃತಿ ತಿಳಿಯಲು ಬರುತ್ತಾರೆ ಆ ನಿಟ್ಟಿನಲ್ಲಿ ರಾಜಾಸೀಟು ಉದ್ಯಾನವನದಲ್ಲಿ ಜಿಲ್ಲೆಯ ಪ್ರವಾಸೋದ್ಯಮ ಹಾಗೂ ಪ್ರಕೃತಿ ಹಾಗೂ ಕಲೆ ಸಂಸ್ಕೃತಿ ಅಚಾರ ವಿಚಾರವನ್ನು ಬಿಂಬಿಸುವಲ್ಲಿ ಫಲಪುಷ್ಪ ಪ್ರದರ್ಶನ ಸಹಕಾರಿಯಾಗಿದೆ ಎಂದು ಹೇಳಿದರು.

ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾ ಮಾತನಾಡಿ, ಫಲಪುಷ್ಪ ಪ್ರದರ್ಶನ ಅರ್ಕಷಣಿಯಾವಾಗಿದೆ. ಇದೊಂದು ಉತ್ತಮ ಪ್ರಯತ್ನವಾಗಿದೆ ಮುಂದಿನ ಬಾರಿ ಇನ್ನೂ ಉತ್ತಮ ಫಲಪುಷ್ಪ ಪ್ರದರ್ಶನ ಏರ್ಪಡಿಸಲಾಗುವುದು ಎಂದರು. ಫಲಪುಷ್ಪ ಪ್ರದರ್ಶನದ ವೀಕ್ಷಣೆಗೆ ರೂ. 10.00 ಗಳ ಪ್ರವೇಶ ಶುಲ್ಕ ಹಾಗೂ ಮಕ್ಕಳಿಗೆ ರೂ. 5.00 ಮತ್ತು ಶಾಲಾ ಮಕ್ಕಳಿಗೆ ಉಚಿತವಾಗಿ ಪ್ರವೇಶವಿದೆ ಎಂದು ಅವರು ತಿಳಿಸಿದರು.

ವಿಧಾನ ಪರಿಷತ್ ಸದಸ್ಯರಾದ ಸುನೀಲ್ ಸುಬ್ರಮಣಿ, ಅರಣ್ಯ ಅಭಿವೃದ್ಧಿ ನಿಗಮದ ಉಪಾಧ್ಯಕ್ಷರಾದ ಪದ್ಮಿನಿ ಪೊನ್ನಪ್ಪ, ಜಿ.ಪಂ.ಅಧ್ಯಕ್ಷರಾದ ಬಿ.ಎ.ಹರೀಶ್, ಉಪಾಧ್ಯಕ್ಷರಾದ ಲೋಕೇಶ್ವರಿ ಗೋಪಾಲ್. ಜಿ.ಪಂ.ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷರಾದ ಎಂ.ಕೆ.ವಿಜು ಸುಬ್ರಮಣಿ, ತಾ.ಪಂ. ಅಧ್ಯಕ್ಷರಾದ ತೇಕಡೆ ಶೋಭಾ ಮೋಹನ್ ನಗರಸಭೆ ಅಧ್ಯಕ್ಷರಾದ ಕಾವೇರಮ್ಮ ಸೋಮಣ್ಣ, ಜಿ.ಪಂ. ಮುಖ್ಯಕಾರ್ಯನಿರ್ವಹಣಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರ,ತೋಟಗಾರಿಕೆ ಇಲಾಖೆ ಉಪನಿರ್ದೇಶಕರಾದ ದೇವಕಿ, ನಗರಸಭೆ ಪೌರಾಯುಕ್ತರಾದ ಬಿ.ಶುಭ ಇತರರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News