ಕೊಳ್ಳೇಗಾಲ : ಮಾ.10ರಂದು ಅರಣ್ಯ ಇಲಾಖೆ ಸಿಬ್ಬಂದಿಗಳಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ
Update: 2018-03-09 21:50 IST
ಕೊಳ್ಳೇಗಾಲ,ಮಾ.09: ಕಾವೇರಿ ಹಾಗೂ ಮಲೈ ಮಹದೇಶ್ವರ ವನ್ಯಜೀವಿ ವಿಭಾಗ ಜನನಿ ಆಸ್ಪತ್ರೆ, ಲಯನ್ಸ್, ರೋಟರಿ ಸಂಸ್ಥೆ ಸಂಯುಕ್ತಾಶ್ರಯದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಗಳಿಗೆ ಮಾ.10ರಂದು ಉಚಿತ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಲಾಗಿದೆ.
ಪಟ್ಟಣದ ಡಿಎಫ್‍ಒ ಕಚೇರಿ ಆವರಣದಲ್ಲಿರುವ ಕಾವೇರಿ ಸಭಾಂಗಣದಲ್ಲಿ ಬೆಳಿಗ್ಗೆ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ವಿಜಯ್‍ಲಾಲ್ ಮೀನಾ ಅವರು ಆರೋಗ್ಯ ಶಿಬಿರವನ್ನು ಉದ್ಘಾಟಿಸುವರು.
ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ. ರಮೇಶ್‍ಕುಮಾರ್, ಡಾ. ಮಾಲತಿಪ್ರಿಯಾ, ಲಯನ್ಸ್ ಅಧ್ಯಕ್ಷ ವೆಂಕಟೇಶ್‍ಬಾಬು, ರೋಟರಿ ಅಧ್ಯಕ್ಷ ಜೆ. ಕುಮಾರಸ್ವಾಮಿ ಜನನಿ ಆಸ್ಪತ್ರೆ ವೈದ್ಯರಾದ ಡಾ. ಪ್ರವೀಣ್‍ಕುಮಾರ್, ಡಾ. ಶಿವಕಿಶೋರ್, ಡಾ. ಸಯದ್ ಹಿದಾಯತ್‍ಉಲ್ಲಾ, ಡಾ. ರೂಪಾ ಇತರರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು.