ಕರ್ನಾಟಕ ರಾಜ್ಯ ಉಪ್ಪಾರ ಅಭಿವೃದ್ದಿ ನಿಗಮ ನೂತನ ಅಧ್ಯಕ್ಷರಾಗಿ ಎಸ್.ಶಿವಕುಮಾರ್ ನೇಮಕ
Update: 2018-03-09 21:56 IST
ಕೊಳ್ಳೇಗಾಲ,ಫೆ.09: ಕೊಳ್ಳೇಗಾಲ ತಾಲ್ಲೂಕಿನ ಮದುವನಹಳ್ಳಿ ಗ್ರಾಮದ ಮಾಜಿ ಜಿಪಂ ಸದಸ್ಯ ಎಸ್.ಶಿವಕುಮಾರ್ ಅವರನ್ನು ಕರ್ನಾಟಕ ರಾಜ್ಯ ಉಪ್ಪಾರ ಅಭಿವೃದ್ದಿ ನಿಗಮ ನೂತನ ಅಧ್ಯಕ್ಷರಾಗಿ ಸರ್ಕಾರವು ನೇಮಕ ಮಾಡಿದೆ.
ಆಯ್ಕೆಗೆ ಶ್ರಮಿಸಿದ ಜಿಲ್ಲಾ ಉಸ್ತುವರಿ ಸಚಿವೆ ಗೀತಾ ಮಹದೇವಪ್ರಸಾದ್, ಸಂಸದ ದ್ರುವನಾರಾಯಣ್, ಶಾಸಕರುಗಳಾದ ಪುಟ್ಟರಂಗಶೆಟ್ಟಿ, ಎಸ್.ಜಯಣ್ಣ, ಆರ್.ನರೇಂದ್ರ ರವರಿಗೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.