×
Ad

ಚಿಕ್ಕಮಗಳೂರು; ಆರ್‌ಟಿಒ ಕಚೇರಿ, ದ್ವಿತೀಯ ದರ್ಜೆ ಸಹಾಯಕರ ಮನೆಗೆ ಎಸಿಬಿ ದಾಳಿ : ದಾಖಲೆ ವಶ

Update: 2018-03-09 23:01 IST

ಚಿಕ್ಕಮಗಳೂರು, ಮಾ. 9: ಆರ್‌ಟಿಒ ಕಚೇರಿ ಹಾಗೂ ದ್ವಿತೀಯ ದರ್ಜೆ ಸಹಾಯಕರ ಕಚೇರಿಗೆ ಎಸಿಬಿ ಅಧಿಕಾರಿ ಗಳ ತಂಡ ಶುಕ್ರವಾರ ದಾಳಿ ನಡೆಸಿ ಹಲವು ದಾಖಲೆ ಪತ್ರಗಳನ್ನು ವಶಕ್ಕೆ ಪಡೆದಿದ್ದಾರೆ.

ಆರ್‌ಟಿಒ ಕಚೇರಿಯ ದ್ವಿತೀಯ ದರ್ಜೆ ಸಹಾಯಕ ವೀರೂಪಾಕ್ಷ ಅವರ ಕಚೇರಿ ಹಾಗೂ ನಗರದ ಜಯನಗರದಲ್ಲಿರುವ ಮನೆ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದರು.

ಅಕ್ರಮ ಆಸ್ತಿ ಗಳಿಕೆ ಆರೋಪದ ಹಿನ್ನೆಲೆ ದಾಳಿ ನಡೆಸಿದ ಹಾಸನ ಎಸಿಬಿ ಡಿವೈಎಸ್ಪಿಚಂದ್ರಪ್ಪ, ಮಂಡ್ಯ ಎಸಿಬಿ ಡಿವೈಎಸ್ಪಿಶೈಲೇಂದ್ರ ನೇತೃತ್ವದ ತಂಡ ಸತತ 3 ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿತು. ಬಳಿಕ ಮನೆ ಮತ್ತು ಕಚೇರಿಯಿಂದ ಕೆಲ ದಾಖಲೆ ಪತ್ರಗಳನ್ನು ವಶಕ್ಕೆ ಪಡೆದಿದೆ ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News