ಮುಂಬೈಗೆ 25,000 ರೈತರ ಜಾಥಾ...
Update: 2018-03-09 23:32 IST
ತಮ್ಮ ಸಾಲಗಳನ್ನು ಮನ್ನಾ ಮಾಡುವ ಬೇಡಿಕೆಯೊಂದಿಗೆ ಮುಂಬೈಗೆ ಜಾಥಾ ಕೈಗೊಂಡಿರುವ ಸುಮಾರು 25,000 ರೈತರು ಶುಕ್ರವಾರ ಥಾಣೆಯನ್ನು ತಲುಪಿದ್ದಾರೆ. ಸೋಮವಾರ ಮುಂಬೈನಲ್ಲಿ ವಿಧಾನಸಭೆಗೆ ಮುತ್ತಿಗೆ ಹಾಕಲು ಪ್ರಯತ್ನಿಸುವ ಮೂಲಕ ಅವರು ರಾಜ್ಯ ಸರಕಾರದ ರೈತವಿರೋಧಿ ನೀತಿಗಳ ವಿರುದ್ಧ ಪ್ರತಿಭಟನೆ ನಡೆಸಲಿದ್ದಾರೆ. ಹೆಚ್ಚಿನ ರೈತರು ಕೆಂಪು ಅಂಗಿ ಮತ್ತು ಕೆಂಪು ಟೋಪಿಗಳನ್ನು ಧರಿಸಿದ್ದು, ಕುಡುಗೋಲು ಮತ್ತು ಸುತ್ತಿಗೆಯ ಚಿತ್ರವಿರುವ ಧ್ವಜಗಳನ್ನು ಹಿಡಿದು ಸಾಗುತ್ತಿದ್ದಾರೆ. ಮಂಗಳವಾರ ನಾಸಿಕ್‌ನಿಂದ 180 ಕಿ.ಮೀ.ದೂರದ ಮುಂಬೈಗೆ ತಮ್ಮ ಕಾಲ್ನಡಿಗೆ ಜಾಥಾ ಆರಂಭಿಸಿರುವ ಈ ರೈತರು ಪ್ರತಿದಿನ ಸುಮಾರು 30 ಕಿ.ಮೀ.ಗಳನ್ನು ಕ್ರಮಿಸುತ್ತಿದ್ದಾರೆ.