×
Ad

ಸೊರಬ : ಲೋಕಾಯುಕ್ತ ನ್ಯಾ.ವಿಶ್ವನಾಥ ಶೆಟ್ಟಿ ಅವರ ಮೇಲೆ ನಡೆದ ಹಲ್ಲೆ ಖಂಡಿಸಿ ಪ್ರತಿಭಟನೆ

Update: 2018-03-09 23:40 IST

ಸೊರಬ,ಮಾ.9 : ಲೋಕಾಯುಕ್ತ ನ್ಯಾ.ವಿಶ್ವನಾಥ ಶೆಟ್ಟಿ ಅವರ ಮೇಲೆ ನಡೆದ ಹಲ್ಲೆ ಖಂಡಿಸಿ ಗುರುವಾರ ಸೊರಬ ವಕೀಲರ ಸಂಘದ ವತಿಯಿಂದ ನ್ಯಾಯಾಲಯದ ಕಲಾಪದಿಂದ ಹೊರಗುಳಿದು ಪ್ರತಿಭಟನೆ ನಡೆಸಿದರು.

ಹಿರಿಯ ವಕೀಲ ಹೆಚ್.ಬಿ. ಇಂದೂಧರ ಒಡೆಯರ್ ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನ್ಯಾಯಾಂಗಕ್ಕೆ ವಿಶೇಷ ಸ್ಥಾನಮಾನವಿದೆ. ಅಂತಹ ಸ್ಥಾನದಲ್ಲಿರುವವರ ಮೇಲೆ ಹಲ್ಲೆ ಮಾಡಿರುವುದು ಖಂಡನೀಯ.  ಇದರಿಂದ ಜನಸಾಮಾನ್ಯರು ಭಯಭೀತರಾಗುವ ವಾತಾವರಣ ನಿರ್ಮಾಣವಾಗಿದೆ.  ಇಂತಹ ಕೃತ್ಯಗಳು ಮರು ಕಳಿಸದಂತೆ ಸರ್ಕಾರ ಎಚ್ಚರ ವಹಿಸಬೇಕು ಹಾಗೂ ಹಲ್ಲೆ ಮಾಡಿದವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಒತ್ತಾಯಿಸಿದರು.

ವಕೀಲರ ಸಂಘದ ಅಧ್ಯಕ್ಷ ಗುರುನಾಥ್ ಎಂ. ಪಟೇಲ್, ಕಾರ್ಯದರ್ಶಿ ಗೋಪಾಲ, ಉಪಾಧ್ಯಕ್ಷ ಓಂಕಾರಪ್ಪ.ಎಸ್., ಸಿ. ಶಿವಕುಮಾರ್, ವೈ.ಜಿ. ಪುಟ್ಟಸ್ವಾಮಿ, ಸೈಯದ್ ಅಬ್ದುಲ್ ರೆಹಮಾನ್, ಸುಧಾಕರ ನಾಯ್ಕ್, ಎಂ.ಕೆ. ವೀರಭದ್ರಪ್ಪ, ಮಂಚಪ್ಪ ಟಿ.ಕೆ, ಎಂ. ರಾಮಪ್ಪ, ಎಂ. ನಾಗರಾಜ ಹುರುಳಿಕೊಪ್ಪ, ಬಿ.ವಿ. ಚಂದ್ರಶೇಖರಪ್ಪ, ಪ್ರಶಾಂತ್.ಜಿ ಉಳವಿ, ಯಲ್ಲಪ್ಪ ಎನ್.ಹೆಚ್, ಮಹೇಂದ್ರ ವಿ.ದೇಸಾಯಿ, ಕೆ.ಎಸ್. ಪರಶುರಾಮ, ರಂಗನಾಥ ಚಕ್ರಪಾಣಿ, ಅಶೋಕ ಸಿ.ವೈ., ಗುರುಮೂರ್ತಿ, ಚಂದ್ರಶೇಖರ, ಉಮೇಶಪ್ಪ.ಜಿ, ಲಕ್ಷ್ಮಣ ಕೆ.ಪಿ, ಡಾಕಪ್ಪ ಹೆಸರಿ ಸೇರಿದಂತೆ ಹಲವರು ಇದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News