×
Ad

ಸಿಹಿರೋಗದಿಂದ ಮುಂದಿನ ತಲೆಮಾರನ್ನು ರಕ್ಷಿಸಬೇಕು : ಡಾ.ಹೇಮಾ ದಿವಾಕರ್

Update: 2018-03-09 23:55 IST

ಬೆಂಗಳೂರು, ಮಾ. 9: ದೇಶದಲ್ಲಿ ಪ್ರತಿವರ್ಷ ರಕ್ತದಲ್ಲಿ ಹೆಚ್ಚು ಸಕ್ಕರೆ ಅಂಶಹೊಂದಿದ ಮಕ್ಕಳು ಜನಿಸುತ್ತಿದ್ದು, ಹೀಗಾಗಿ ಕಿರಿಯ ವಯಸ್ಸಿನಲ್ಲೆ ಮಧುಮೇಹಕ್ಕೆ ತುತ್ತಾಗುವ ಸಾಧ್ಯತೆಗಳಿವೆ. ಆದುದರಿಂದ ಮುಂದಿನ ತಲೆಮಾರನ್ನು ‘ಸಿಹಿರೋಗ’ ಉಳಿಸಬೇಕಿದೆ ಎಂದು ಫೊಗ್ಗಿ ಮಾಜಿ ಅಧ್ಯಕ್ಷ ಡಾ.ಹೇಮಾ ದಿವಾಕರ್ ಸಲಹೆ ಮಾಡಿದ್ದಾರೆ.

ಶುಕ್ರವಾರ ನಗರದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಮಧುಮೇಹ ನಿಯಂತ್ರಿಸಲು ಆರೋಗ್ಯದ ಕಾಳಜಿ ಹಾಗೂ ಅರಿವು ಮೂಡಿಸಬೇಕಿದೆ. ಹೀಗಾಗಿ ‘ಸ್ವೀಟ್ ಹಾರ್ಟ್’ ಯೋಜನೆ ಮೂಲಕ ಆರ್ಟಿಸ್ಟ್ ‘ಸಿಂಗಲ್ ಸ್ಟೆಪ್ ಟೆಸ್ಟ್’ ಅನ್ನು ಎಲ್ಲ ಗರ್ಭಿಣಿಯರಿಗೆ ನೀಡುತ್ತದೆ ಎಂದರು.

ಮಾ.10ರಂದು ಗರ್ಭಧಾರಣೆಯಲ್ಲಿ ಮಧುಮೇಹ ಕುರಿತಾದ ಅರಿವು ಮೂಡಿಸಲು ಮುಂದಾಗಿದ್ದು, ಈ ಕುರಿತು ಅರಿವು ಮೂಡಿಸಲು ಸಾಧ್ಯವಿರುವ ಪ್ರತಿಯೊಂದು ದಾರಿಯನ್ನೂ ಬಳಸಿಕೊಳ್ಳಲಿದ್ದು ‘ವಿಷನ್-2022’ ಅಭಿಯಾನ ಕೈಗೊಳ್ಳಲಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕೇಂದ್ರ ಆರೋಗ್ಯ ಸಚಿವಾಲಯದ ಡಾ.ದಿನೇಶ್ ಬಸ್ವಾಲ್, ಸ್ತ್ರೀರೋಗ ತಜ್ಞೆ ಡಾ.ಸೀತಾಂ ಭತೇಜಾ, ನಟಿ ಲೀಲಾ, ಡಾ.ಸ್ವರ್ಣಲತಾ ಸೇರಿದಂತೆ ಇನ್ನಿತರರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News