ಬಿಜೆಪಿ ಜನಹಿತಕ್ಕಾಗಿ, ಅಭಿವೃದ್ಧಿ ಪರ ಕೆಲಸಕ್ಕಾಗಿ ದುಡಿಯುವ ಪಕ್ಷ: ಸಂಸದ ಜಿ.ಎಂ.ಸಿದ್ದೇಶ್ವರ್

Update: 2018-03-10 16:46 GMT

ದಾವಣಗೆರೆ,ಮಾ.10: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯ 8 ಕ್ಷೇತ್ರಗಳಲ್ಲಿ ಜಯಭೇರಿಸುವ ಮೂಲಕ ಕಾಂಗ್ರೆಸ್ ತಕ್ಕ ಉತ್ತರ ನೀಡಬೇಕು. ಈ ನಿಟ್ಟಿನಲ್ಲಿ ಕಾರ್ಯಕರ್ತರು ಈಗಿನಿಂದಲೇ ಸನ್ನದರಾಗಬೇಕು ಎಂದು ಸಂಸದ ಜಿ.ಎಂ.ಸಿದ್ದೇಶ್ವರ್ ಕರೆ ನೀಡಿದರು. 

ಇಲ್ಲಿನ ಶ್ರೀಮತಿ ಪಾರ್ವತಮ್ಮ ಶಾಮನೂರು ಶಿವಶಂಕರಪ್ಪ ಕಲ್ಯಾಣ ಮಂಟಪದಲ್ಲಿ ಶನಿವಾರ ಉತ್ತರ ಕ್ಷೇತ್ರದ ನವಶಕ್ತಿ ಸಮಾವೇಶ ಉದ್ಘಾಟಿಸಿ ಮಾತ ನಾಡಿದರು. ಮಾಜಿ ಸಚಿವ ರವೀಂದ್ರನಾಥ್ ಗೆಲುವಿನೊಂದಿಗೆ ಬಿಜೆಪಿ ಶುಭಾರಂಭ ಮಾಡಲಿದ್ದು, ಕಾರ್ಯಕರ್ತರು ಶ್ರಮದಿಂದ ಚುನಾವಣೆಗೆ ಸಜ್ಜಾದಾಗ ಮಾತ್ರ ಇಂತಹ ಸಾಧನೆ ಸಾಧ್ಯ. ಜನಹಿತಕ್ಕಾಗಿ, ಅಭಿವೃದ್ಧಿ ಪರ ಕೆಲಸಕ್ಕಾಗಿ ದುಡಿಯುವ ಪಕ್ಷ ನಮ್ಮದು ಎಂದರು.  

ದಾವಣಗೆರೆ ಅಭಿವೃದ್ಧಿಗೆ ಕಾಂಗ್ರೆಸ್ಸಿನವರು 2-3 ಸಾವಿರ ಕೋಟಿ ತಂದಿದ್ದೇವೆಂದು ಕೊಚ್ಚಿಕೊಳ್ಳುತ್ತಾರೆ. ಆದರೆ, ಯಡಿಯೂರಪ್ಪ ಸರ್ಕಾರದಲ್ಲಿ ರವೀಂದ್ರನಾಥ ಸಚಿವರಾಗಿರಿದ್ದಾಗ 923 ಕೋಟಿ ವೆಚ್ಚದಲ್ಲಿ ಭದ್ರಾ ನಾಲೆ ಆಧುನೀಕರಣ, ದಾವಣಗೆರೆ ವಿಶ್ವ ವಿದ್ಯಾನಿಲಯ ಸ್ಥಾಪನೆ, ಪಾಲಿಕೆಯಾಗಿದ್ದು, ಡಿಸಿ ಕಚೇರಿಗೆ ಸ್ವಂತ ಕಟ್ಟಡ, ಪಾಲಿಕೆಗೆ 200 ಕೋಟಿ ವಿಶೇಷಾನುದಾನ, ನೂರಾರು ಪಾರ್ಕ್ ಜಾಗ ಭದ್ರಪಡಿಸಿದ್ದು ನಮ್ಮ ಸರ್ಕಾರ ಎಂದು ಅವರು ವಿವರಿಸಿದರು. 

ಪರಿಶಿಷ್ಟ, ಹಿಂದುಳಿದವರ ಕಾಲನಿ ಅಭಿವೃದ್ದಿಗೆ ಹೊನ್ನಾಳಿ, ಹರಿಹರ ತುಂಗಭದ್ರಾ ನದಿಗೆ ಹೊಸ ಸೇತುವೆ. ಶೇ.0 ಬಡ್ಡಿ ದರಕ್ಕೆ ಸಾಲ, 2 ಸಲ ರೈತರ ಸಾಲ ಮನ್ನಾ, ವಿಧವಾ ವೇತನ, ಭಾಗ್ಯಲಕ್ಷ್ಮಿ ಬಾಂಡ್, ಬೈಸಿಕಲ್, ಮಡಿಲು ಕಿಟ್, ಸುವರ್ಣ ಭೂಮಿ ಚೇತನ ಹೀಗೆ ಸಾವಿರಾರು ಕೋಟಿ ವೆಚ್ಚದಲ್ಲಿ ನಾವೂ ಅಭಿವೃದ್ಧಿ ಕಾರ್ಯ ಕೈಗೊಂಡಿದ್ದೇವೆ. ಆದರೆ, ರವೀಂದ್ರನಾಥ್ ಎಂದಿಗೂ ಈಗಿನವರಂತೆ ವರ್ತಿಸಲಿಲ್ಲ ಎಂದು ಹಾಲಿ ಸಚಿವ ಎಸ್ಸೆಸ್ ಮಲ್ಲಿಕಾರ್ಜುನ ಹೆಸರು ಪ್ರಸ್ತಾಪಿಸದೇ ವಾಗ್ದಾಳಿ ನಡೆಸಿದರು.  

ಪ್ರಧಾನಿ ನರೇಂದ್ರ ಮೋದಿ ಕಳೆದ 4 ವರ್ಷದಿಂದಲೂ ಪಾರದರ್ಶಕ ಆಡಳಿತ ನೀಡುತ್ತಾ, ದೇಶವನ್ನು ಸರ್ವಾಂಗೀಣವಾಗಿ ಅಭಿವೃದ್ದಿಪಡಿಸುತ್ತಿದ್ದಾರೆ. ರಜೆ ಇಲ್ಲದೇ ದಿನದ 16-18 ತಾಸು ದುಡಿದ ಪ್ರಧಾನಿ ನಮ್ಮ ದೇಶದ ಇತಿಹಾಸದಲ್ಲಿದ್ದರೆ ಅದು ಮೋದಿ ಮಾತ್ರ ಎಂದು ಅವರು  ಹೇಳಿದರು. 

ಸತತ 3 ಅವದಿಗೆ ಸಂಸದನಾಗಿ 6 ಪಥದ ರಾಷ್ಟ್ರೀಯ ಹೆದ್ದಾರಿಗೆ 3400 ಕೋಟಿ, ಚಿಕ್ಕಜಾಜೂರು-ಹುಬ್ಬಳ್ಳಿ ಮಧ್ಯೆ ದ್ವಿಪಥ ರೈಲ್ವೆ ಮಾರ್ಗಕ್ಕೆ 1700 ಕೋಟಿ, ಬುದ್ಧಿಮಾಂದ್ಯರಿಗಾಗಿ ಸಿಆರ್ ಸೆಂಟರ್, ಪಾಸ್ ಪೋರ್ಟ್ ಸೇವಾ ಕೇಂದ್ರ, 10 ಎಕರೆಯಲ್ಲಿ ಕೇಂದ್ರೀಯ ವಿದ್ಯಾಲಯ ಸ್ಥಾಪಿಸಿದ್ದು, ದಾವಣಗೆರೆ-ಚನ್ನಗಿರಿ ಹೆದ್ದಾರಿ, ಚಿತ್ರದುರ್ಗ-ಶಿವಮೊಗ್ಗ ಹೆದ್ದಾರಿಗೆ 327 ಕೋಟಿ, ಹೊನ್ನಾಳಿ ತಾ. ತುಂಗಾ ಮೇಲ್ದಂಡೆಗೆ 343 ಕೋಟಿ ಮಂಜೂರು, ಸ್ಮಾರ್ಟ್ ಸಿಟಿ, ಅಮೃತ ನಗರ ಹೀಗೆ ಸಾಕಷ್ಟು ಕೆಲಸ ತಮ್ಮ ಅವದಿಯಲ್ಲಾಗಿದೆ ಎಂದು ಅವರು ಹೇಳಿದರು. 

ಮಾಜಿ ಸಚಿವ ಎಸ್.ಎ.ರವೀಂದ್ರನಾಥ, ವಿಪ ಮಾಜಿ ಮುಖ್ಯ ಸಚೇತಕ ಡಾ.ಎ.ಎಚ್.ಶಿವಯೋಗಿಸ್ವಾಮಿ, ಜಿಲ್ಲಾ ಉಸ್ತುವಾರಿ ದತ್ತಾತ್ರಿ, ರಾಜ್ಯ ಕಾರ್ಯ
ದರ್ಶಿ ರವಿಕುಮಾರ, ಮಾಜಿ ಶಾಸಕ ಎಂ.ಬಸವರಾಜ ನಾಯ್ಕ, ಬಿಜೆಪಿ ಜಿಲ್ಲಾಧ್ಯಕ್ಷ ಯಶವಂತರಾವ್ ಜಾಧವ, ಮಹಿಳಾ ಮೋರ್ಚಾ ಅಧ್ಯಕ್ಷೆ ಎಚ್.ಸಿ.ಜ
ಯಮ್ಮ, ಜಿಪಂ ಅಧ್ಯಕ್ಷೆ ಮಂಜುಳಾ ರಾಜು, ಉಪಾಧ್ಯಕ್ಷೆ ಗೀತಾ ಗಂಗಾನಾಯ್ಕ, ತಾಪಂ ಅಧ್ಯಕ್ಷೆ ಮಮತಾ ಮಲ್ಲೇಶಪ್ಪ, ಧನಂಜಯ ಕಡ್ಲೆಬಾಳ್, ಎಚ್.ಕೆ.ಬಸವರಾಜ, ಜಿ.ಎಂ.ಸುರೇಶ, ಅಣಬೇರು ಜೀವನಮೂರ್ತಿ, ಲೋಕಿಕೆರೆ ನಾಗರಾಜ, ಗುಂಡೇರಿ ಸುರೇಶ ಇತರರು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News