ವರ್ಷದೊಳಗೆ ಜಲ ಸಿರಿ ಯೋಜನೆಯಲ್ಲಿ 24 ಗಂಟೆಗಳ ಕುಡಿಯುವ ನೀರಿನ ವ್ಯವಸ್ಥೆ: ಶಾಮನೂರು ಶಿವಶಂಕರಪ್ಪ
ದಾವಣಗೆರೆ,ಮಾ.10: ವರ್ಷದೊಳಗೆ ಜಲ ಸಿರಿ ಯೋಜನೆಯಲ್ಲಿ 24 ಗಂಟೆಗಳ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗುವುದು ಎಂದು ಶಾಸಕ ಶಾಮನೂರು ಶಿವಶಂಕರಪ್ಪ ಹೇಳಿದರು.
ಇಲ್ಲಿನ ರೇಣುಕಾಮಂದಿರದಲ್ಲಿ ಜಿಲ್ಲಾ ಸರ್ ಎಂ. ವಿಶ್ವೇಶ್ವರಯ್ಯ ಕಟ್ಟಡ ನಲ್ಲಿ ಮತ್ತು ಸ್ಯಾನಿಟರಿ ಕಾರ್ಮಿಕರ ಸಂಘದ ವತಿಯಿಂದ ವಿಶ್ವ ಪ್ಲಂಬರ್ ದಿನಾಚರಣೆ, ಸಂಘದ 5ನೇ ವರ್ಷದ ವಾರ್ಷಿಕೋತ್ಸವ, ಹಿರಿಯ ಪ್ಲಂಬರ್ ಮೇಸ್ತ್ರಿಗಳಿಗೆ ಸನ್ಮಾನ ಮತ್ತು ಪ್ರತಿಭಾವಂತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ನಗರದಲ್ಲಿ ಹೊಸ ಮಾರ್ಗಗಳ ವ್ಯವಸ್ಥೆ ಮಾಡಲಾಗಿದ್ದು, 19 ನೀರಿನ ಟ್ಯಾಂಕ್ ಕಟ್ಟಡವನ್ನು ನಿರ್ಮಿಸಲಾಗುವುದು. ಮಹಾನಗರ ಪಾಲಿಕೆಯ ಸದಸ್ಯರ ಅವಧಿ ಇನ್ನು ಒಂದೂವರೆ ವರ್ಷವಿದ್ದು, ಅಷ್ಟರೊಳಗೆ ಸಮರ್ಪಕ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗುವುದು. ಪ್ರತಿಯೊಬ್ಬರು ಒಗ್ಗಟ್ಟಾಗಿ ಸರ್ಕಾರದಿಂದ ಸಿಗುವ ಸವಲತ್ತುಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದು ಎಂದರು.
ಈ ಸಂದರ್ಭದಲ್ಲಿ ಮಾಲತೇಶ್, ಪಾಲಿಕೆ ಸದಸ್ಯರಾದ ಶಿವನಹಳ್ಳಿ ರಮೇಶ್, ದಿನೇಶ್ ಕೆ. ಶೆಟ್ಟಿ, ಪಿ.ಕೆ. ಲಿಂಗರಾಜ್, ನೆಲ್ಲಿ ಮತ್ತು ಸ್ಯಾನಿಟರಿ ಕಾರ್ಮಿಕರ ಸಂಘದ ಅಧ್ಯಕ್ಷ ಎನ್. ವೀರಣ್ಣ, ದೇವರಮನಿ ಶಿವಕುಮಾರ್, ಬಳ್ಳಾರಿ ವಿಭಾಗದ ಸಹಾಯಕ ಕಾರ್ಮಿಕ ಆಯುಕ್ತ ಡಿ.ಜಿ. ನಾಗೇಶ್, ಹೆಚ್.ಬಿ. ಮಂಜುನಾಥ್ ಸ್ವಾಮಿ, ಪ್ರಭು ಪ್ರಸಾದ್, ಅಂದನೂರು ಅಕ್ಷಯ್, ವಕೀಲರಾದ ಬಳ್ಳಾರಿ ರೇವಣ್ಣ, ಸಿದ್ದಲಿಂಗಪ್ಪ, ಶಿವಕುಮಾರ್ ಡಿ. ಶೆಟ್ಟರ್ ಇತರರು ಇದ್ದರು.