×
Ad

ಗಂಗಾವತಿ: ಶಾಸಕರಿಂದ ನೂತನ ಡಯಾಲಿಸಿಸ್, ಐಸಿಯು, ಸಿಟಿಸ್ಕ್ಯಾನ್ ಉದ್ಘಾಟನೆ

Update: 2018-03-10 22:24 IST

ಗಂಗಾವತಿ,ಮಾ.10: ನಗರದ ಸರ್ಕಾರಿ ಆಸ್ಪತ್ರೆ ಯಲ್ಲಿ ನೂತನ ಡಯಾಲಿಸಿಸ್, ಐಸಿಯು ಘಟಕ ಹಾಗೂ ಸಿಟಿ ಸ್ಕ್ಯಾನ್, ಶುದ್ಧ ಕುಡಿಯುವ ನೀರಿನ ಘಟಕವನ್ನು ಶಾಸಕ ಇಕ್ಬಾಲ್ ಅನ್ಸಾರಿಯವರು ಉದ್ಘಾಟನೆ ಮಾಡಿದರು.

ನಂತರ ಮಾತ ನಾಡಿದ ಅವರು, ಸರ್ಕಾರಿ ಆಸ್ಪತ್ರೆಯಲ್ಲಿ ಈಗ ಡಯಾಲಿಸಿಸ್, ಐಸಿಯು ಹಾಗೂ ಸಿಟಿ ಸ್ಕ್ಯಾನ್ ಕೇಂದ್ರ ಸೇರಿ ಅತ್ಯಾಧುನಿಕ ಚಿಕಿತ್ಸಾ ಘಟಕಗಳಿದ್ದು, ರಾಜ್ಯದಲ್ಲೇ ಇದು ಪ್ರಥಮವಾಗಿದೆ ಎಂದರು.

ಟೆಲಿಔಷಧಿ ಕೇಂದ್ರ ಕೂಡ ಇದ್ದು, ಇಲ್ಲಿ ಚಿಕಿತ್ಸೆ ಲಭ್ಯವಿಲ್ಲದ ಸಂದರ್ಭದಲ್ಲಿ ಉನ್ನತ ಆಸ್ಪತ್ರೆಗೆ ರೋಗಿಗಳ ಆರೋಗ್ಯ ವರದಿ ವಿಡಿಯೋ ಮೂಲಕ ಮಾಹಿತಿ ನೀಡಿ ಚಿಕಿತ್ಸೆ ಕೊಡುವ ಕೇಂದ್ರ ಅರಂಭ ಮಾಡಲಾಗಿದೆ. ಆರೋಗ್ಯ ಸಚಿವ ರಮೇಶ ಕುಮಾರ್ ಸೂಚನೆ ಮೇರೆಗೆ ತಮ್ಮ ಶಾಸಕರ ನಿಧಿಯಿಂದ 30 ಲಕ್ಷ ಅನುದಾನ ಸೇರಿ ಒಟ್ಟು 5 ಕೋಟಿ ರೂ.ಗಳ ವೆಚ್ಚದಲ್ಲಿ ಆಸ್ಪತ್ರೆಯಲ್ಲಿ ಅತ್ಯಾಧುನಿಕ ಚಿಕಿತ್ಸೆ ನೀಡುವ ಯಂತ್ರಗಳನ್ನು ಅಳವಡಿಸಲಾಗಿದೆ. ಆನೆಗುಂದಿ ರಸ್ತೆಯಲ್ಲಿ 10 ಕೋಟಿ ರ. ವೆಚ್ಚದಲ್ಲಿ ಹೆರಿಗೆ ಆಸ್ಪತ್ರೆ ಕಾಮಗಾರಿ ನಡೆಯುತ್ತಿದ್ದು, ಶೀಘ್ರವೇ ಉದ್ಘಾಟನೆ ಮಾಡಲಾಗುತ್ತದೆ ಎಂದರು.

ಆಸ್ಪತ್ರೆಯಲ್ಲಿ ಮೂಲ ಸೌಕರ್ಯ ಕಲ್ಪಿಸಲು ಹಣದ ಕೊರತೆಇಲ್ಲ. ರೋಗಿಗಳಿಗೆ ಅನುಕೂಲ ಮಾಡಿಕೊಡುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ, ಆರೋಗ್ಯ ಸಚಿವ ರಮೇಶ ಕುಮಾರ್ ಆಶಯ ಗಳನ್ನು ಈಡೇರಿಸಲಾಗುತಿದೆ ಎಂದರು.

ಈ ಸಂದರ್ಭದಲ್ಲಿ ಡಾ. ಈಶ್ವರ ಸವಡಿ, ಡಾ. ಗೌರಿಶಂಕರ, ಡಾ. ಅನಂತ ರಾಜ ಗೋಗಿ, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಮನೋಹರಸ್ವಾಮಿ, ಜಿ.ಪಂ ಸದಸ್ಯ ಅಮರೇಶ ಗೋನಾಳ, ಎಪಿಎಂಸಿ ನಿರ್ದೇಶಕ ರುದ್ರೇಶ ಡ್ಯಾಗಿ ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News