ತುಮಕೂರು: ವೀರಶೈವ ಲಿಂಗಾಯತ ನೌಕರರ ಸಮಾವೇಶಕ್ಕೆ ಚಾಲನೆ
ತುಮಕೂರು, ಮಾ. 11: ಕನಾರ್ಟಕ ರಾಜ್ಯ ವೀರಶೈವ ಲಿಂಗಾಯತ ನೌಕರರ ಕ್ಷೇಮಾಭಿವೃದ್ದಿ ಸಂಘ ಕೇಂದ್ರ ಸಂಘ ಬೆಂಗಳೂರು ಹಾಗೂ ತುಮಕೂರು ಘಟಕದ ವತಿಯಿಂದ ಡಾ ಶ್ರೀ ಶಿವಕುಮಾರ ಸ್ವಾಮೀಜಿ ಅವರಿಗೆ 111 ನೇ ಗುರುವಂದನಾ ಕಾರ್ಯಕ್ರಮ ಅಭಿನಂದನೆ ಹಾಗೂ ರಾಜ್ಯ ಮಟ್ಟದ ವೀರಶೈವ ಲಿಂಗಾಯತ ನೌಕರರ ಸಮಾವೇಶಕ್ಕೆ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಚಾಲನೆ ನೀಡಿ ಮಾತಾನಾಡಿದರು.
ಕಾರ್ಯಕ್ರಮದ ದಿವ್ಯ ಸಾನಿದ್ಯ ಮಠದ ಸಿದ್ದಲಿಂಗ ಸ್ವಾಮೀಜಿ ವಹಿಸಿದ್ದರು. ಕಾರ್ಯಕ್ರಮ ದಲ್ಲಿ ಅಖಿಲ ಭಾರತ ವೀರಶೈವ ಮಹಾ ಸಭಾ ಅಧ್ಯಕ್ಷ ಶ್ಯಾಮನೂರು ಶಿವಶಂಕರಪ್ಪ, ಮಹಾ ಪ್ರಧಾನ ಕಾರ್ಯದರ್ಶಿ ಈಶ್ವರ್ ಖಂಡ್ರೆ ಹಾಗೂ ಪೌರಡಳಿತ ಸಚಿವರು ಡಾ.ಗೀತಾ ಮಹದೇವ್ ಪ್ರಸಾದ್, ಸಕ್ಕರೆ ಮತ್ತು ಸಣ್ಣ ಕೈಗಾರಿಕೆ ಸಚಿವ ಮಾಜಿ ಸಚಿವರಾದ ವಿ ಸೋಮಣ್ಣ, ನಿವೃತ್ತ ಜಿಲ್ಲಾಧಿಕಾರಿ ಡಾ.ಸಿ ಸೋಮಶೇಖರ್, ಮಾಜಿ ಸಂಸದ ಜಿ ಎಸ್ ಬಸವರಾಜು, ನಿವೃತ ಪೊಲೀಸ್ ಮಹಾನಿರ್ದೇಶಕಾರದ ಶಂಕರ್ ಬಿದರಿ ಸದಾಶಿವಯ್ಯ, ಜ್ಯೋತಿ ಪ್ರಕಾಶ್, ಮಿರ್ಜಿ ಜೋತಿ, ಗಣೇಶ್ ಶರಣ್, ಲಯನ್ ಬಿ ನಿರಂಜನ್, ಎಂಬಿ ಶಿವಶಂಕರಪ್ಪ ಹಾಗು ಹಲವು ಮಠಾಧಿಪತಿಗಳು, ಹರಿಹರದ ಶಾಸಕ ಸೇರಿದಂತೆ ಇತರರು ಇದ್ದರು.