×
Ad

ಶಿವಮೊಗ್ಗ: ಐದು ದಿನಗಳ ಸಂಶೋಧನಾ ವಿಧಾನ ಕಾರ್ಯಾಗಾರದ ಸಮಾರೋಪ

Update: 2018-03-11 22:12 IST

ಶಿವಮೊಗ್ಗ,ಮಾ.11: ಅಧುನಿಕತೆಯ ಜಾಡಿನಲ್ಲಿ ಸಿಲುಕಿರುವ ನಮ್ಮ ಯುವ ಸಮೂಹದಲ್ಲಿ ಸಂಶೋದನಾ ಚಿಂತನೆ ಕುಂಟಿತಗೊಂಡಿದ್ದು, ಯುವಕರು ಸಂಶೋದನಾ ಗುಣ ಬೆಳೆಸಿಕೊಳ್ಳುವ ಅವಶ್ಯಕತೆಯಿದ್ದು, ಆಗ ಮಾತ್ರ ಭಾರತ ಅಭಿವೃದ್ದಿಯತ್ತ ಕೊಂಡೊಯ್ಯಲು ಸಾಧ್ಯ ಎಂದು ಬೆಂಗಳೂರಿನ ಆರ್.ವಿ.ಸಿ.ಇ. ಐ.ಇ.ಎಮ್ ವಿಭಾಗದ ಮುಖ್ಯಸ್ಥರಾದ ಡಾ. ನರಹರಿ ಅಭಿಪ್ರಾಯಪಟ್ಟರು.

ನಗರದ ಜೆ.ಎನ್.ಎನ್.ಸಿ.ಇ ಕಾಲೇಜಿನ ಐ.ಎಸ್ ಮತ್ತು ಸಿವಿಲ್ ಇಂಜಿನಿಯರಿಂಗ್ ವಿಭಾಗ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ಐದು ದಿನಗಳ ಸಂಶೋಧನಾ ವಿಧಾನ ಕಾರ್ಯಾಗಾರದ ಸಮಾರೋಪ ನುಡಿಗಳನ್ನಾಡಿದ ಅವರು, ದೇಶದ ಅಭಿವೃದ್ದಿಗೆ ಯುವಕರ ಪಾತ್ರ ಮಹತ್ವದ್ದಾಗಿದ್ದು, ಹೊಸ ಆಲೋಚನೆಗಳು, ಸಂಶೋದನೆಗಳ ಮೂಲಕ ಉತ್ತಮ ಸಮಾಜ ನಿರ್ಮಾಣಕ್ಕೆ ಕಂಕಣ ಬದ್ದರಾಗೊಣ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಜೆ.ಎನ್.ಎನ್.ಸಿ.ಇ ಕಾಲೇಜಿನ ಪ್ರಾಂಶುಪಾಲರಾದ ಡಾ.ಹೆಚ್.ಆರ್.ಮಹದೇವಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಜೆ.ಎನ್.ಎನ್.ಸಿ.ಇ ಕಾಲೇಜಿನ ಉಪ ಪ್ರಾಂಶುಪಾಲರಾದ ಡಾ.ಎಲ್.ಕೆ ಶ್ರೀಪತಿ, ಕಾರ್ಯಾಗಾರದ ವ್ಯವಸ್ಥಾಪಕರಾದ ಡಾ.ಕಾರ್ತಿಕ್.ಬಿ.ಎಸ್, ಡಾ.ಕಿರಣ್ ಎಂ, ಸುದೀಪ್ ಮನೋಹರ್ ಮತ್ತಿತರರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಸಿವಿಲ್ ಇಂಜಿನಿಯರಿಂಗ್ ವಿಭಾಗದ ನಿರ್ದೇಶಕರಾದ ಡಾ.ರಾಜೇಂದ್ರ ಕಟವಾಕರ್ ಸ್ವಾಗತಿಸಿದರು, ಸಹಪ್ರಾದ್ಯಾಪಕರಾದ ಹೇಮಂತ್ ಕುಮಾರ್ ವಂದಿಸಿದರು, ಸೌಮ್ಯ ನಿರೂಪಿಸಿದರು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News