ಮಡಿಕೇರಿ: ಅಗ್ನಿ ಆಕಸ್ಮಿಕ; ಮಹಿಳೆ ಮೃತ್ಯು
Update: 2018-03-11 22:41 IST
ಮಡಿಕೇರಿ, ಮಾ.11: ಅಗ್ನಿ ಆಕಸ್ಮಿಕದಿಂದ ಮಹಿಳೆಯೊಬ್ಬರು ಮೃತಪಟ್ಟಿರುವ ಘಟನೆ ವಿರಾಜಪೇಟೆ ತಾಲೂಕು ಚಾಮಿಯಾಲ ಗ್ರಾಮದಲ್ಲಿ ನಡೆದಿದೆ.
ಇಲ್ಲಿನ ನಿವಾಸಿ ನಾಸೀರ್ ಸಜ್ಜು ಎಂಬುವವರ ಪತ್ನಿ ಅಸ್ಮಾ ಮೃತ ಮಹಿಳೆ. ತಮ್ಮ ಮನೆಯ ಒತ್ತಿನಲ್ಲಿರುವ ಶೆಡ್ ನಲ್ಲಿ ಅಡುಗೆ ಮಾಡಲು ಒಲೆಗೆ ಸೀಮೆಎಣ್ಣೆ ಸುರಿಯುವ ಸಂದರ್ಭದಲ್ಲಿ ಆಕಸ್ಮಿಕವಾಗಿ ಬೆಂಕಿ ಆಕೆಯ ಬಟ್ಟೆಗಳಿಗೆ ತಗುಲಿ ಸುಟ್ಟ ಗಾಯಗಳಿಂದ ಸಾವನ್ನಪ್ಪಿರುವುದಾಗಿ ಹೇಳಲಾಗಿದೆ.
ಈ ಸಂಬಂಧ ಅಸ್ಮಾ ಅವರ ತಂದೆ ಸಿ.ಇಬ್ರಾಹಿಂ ಅವರು ನೀಡಿದ ದೂರಿನ ಹಿನ್ನೆಲೆಯಲ್ಲಿ ವಿರಾಜಪೇಟೆ ಗ್ರಾಮಾಂತರ ಠಾಣಾ ಪೊಲೀಸರು ತನಿಖೆ ಕೈಗೊಂಡಿದ್ದಾರೆ.