ಸಜ್ಜಾದ್ ನೊಮಾನಿ ವಿರುದ್ದ ಸುಳ್ಳು ದೇಶದ್ರೋಹ ಆರೋಪ: ಎಸ್.ಡಿ.ಪಿ.ಐ ಪ್ರತಿಭಟನೆ

Update: 2018-03-12 16:13 GMT

ಮೈಸೂರು,ಮಾ.12: ಆಲ್-ಇಂಡಿಯಾ ಮುಸ್ಲಿಂ ಪರ್ಸನಲ್ ಲಾ ಬೋರ್ಡ್ ನ ರಾಷ್ಟ್ರೀಯ ವಕ್ತಾರಾದ ಮೌಲನಾ ಖಲೀಲ್ ಉರ್ ರಹ್‍ಮಾನ್ ಸಜ್ಜಾದ್ ನೊಮಾನಿ ರವರ ಮೇಲೆ ಸುಳ್ಳು ದೇಶದ್ರೋಹ ಆರೋಪ ಮಾಡಲಾಗಿದೆ ಎಂದು ಖಂಡಿಸಿ ಎಸ್.ಡಿ.ಪಿ.ಐ ವತಿಯಿಂದ ಪ್ರತಿಭಟನೆ ನಡೆಸಲಾಯಿತು.

ನಗರದ ಏಕ್ ಮಿನಾರ್ ಮಸೀದಿ ಹತ್ತಿರ, ಮಹದೇವಪುರ ಮಖ್ಯ ರಸ್ತೆಯಲ್ಲಿ ಸೋಮವಾರ ಪ್ರತಿಭಟನೆ ನಡೆಸಿ ಎಸ್.ಡಿ.ಪಿ.ಐ ರಾಜ್ಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಮಜೀದ್ ಮಾತನಾಡಿ, ಮೌಲನಾ ಸಜ್ಜಾದ್ ನೊಮಾನಿ ಸಾಹೇಬ್ ರವರ ಮೇಲೆ ಸುಳ್ಳು ದೇಶದ್ರೋಹ ಆರೋಪದಡಿ ಉತ್ತರ ಪ್ರದೇಶದಲ್ಲಿ ಎಫ್.ಐ.ಆರ್ ದಾಖಲಿಸಿರುವುದು ಖಂಡನೀಯ. ಸ್ವಾತಂತ್ರ್ಯ ಹೋರಾಟಗಾರರ ಕುಟುಂಬದಲ್ಲಿ ಹುಟ್ಟಿರುವ ಜನಾಬ್ ಸಜ್ಜಾದ್ ರವರು ಜೀವನದುದ್ದಕ್ಕೂ ಶಾಂತಿ, ಸೌರ್ಹಾದತೆ ಮತ್ತು ದೇಶ ಪ್ರೇಮದ ದೇಯ್ಯವನ್ನು ಎತ್ತಿಹಿಡಿದಂತವರು. ದೇಶದಲ್ಲಿ ಪ್ರಜಾಸತ್ಯವನ್ನು ಹಾಗೂ ಜಾತ್ಯತೀತ ತತ್ವವನ್ನು ಬಲಪಡಿಸಲು ನಿರಂತರ ಹೋರಾಟವನ್ನು ಮಾಡುತ್ತಿದ್ದರು. ಪೀಸ್ ಆಂಡ್ ಜಸ್ಟೀಸ್ ಎಂಬ ಸಂಸ್ಥೆಯನ್ನು ಸ್ಥಾಪಿಸಿ ಜಸ್ಟೀಸ್ ಸಾವಂತ್ ಹಾಗೂ ಜಸ್ಟೀಸ್ ಕೊಲ್ಸೇ ಪಾಟಿಲ್ ರವರ ನೇತೃತ್ವದಲ್ಲಿ ಭಾರತದ್ಯಾಂತ ನಿರಂತರ ಶೋಷಿತ ಜನವರ್ಗಗಳ ಐಕ್ಯತೆ ಹಾಗೂ ಪ್ರಜಾಸತ್ಯ ಉಳಿವಿಗಾಗಿ ಮತ್ತು ಶಾಂತಿ ಸೌರ್ಹದತೆಗಾಗಿ ಸಂಚರಿಸುತ್ತಿದ್ದರು ಎಂದು ಹೇಳದರು. 

ಎಲ್ಲಾ ಧರ್ಮ ಗ್ರಂಥಗಳ ಅಗಾಧ ಪಾಂಡಿತ್ಯವಿರುವ ಸಜ್ಜಾದ್ ನೊಮಾನಿಯವರನ್ನು ಇವತ್ತು ಒಂದು ವ್ಯವಸ್ಥಿತ ಷಡ್ಯಂತರದ ಭಾಗವಾಗಿ ಅವರ ಮೇಲೆ ಸುಳ್ಳು ದೂರಿನ ಆಧಾರದ ಮೇಲೆ ಮೊಕದ್ದಮೆಯನ್ನು ದಾಖಲಿಸಲಾಗಿದೆ ಎಂದರು.

ಪ್ರತಿಭಟನಾ ಸಭೆಯಲ್ಲಿ ಎಸ್.ಡಿ.ಪಿ.ಐ ಮೈಸೂರು ನಗರಾಧ್ಯಕ್ಷ ಅಝಾಮ್ ಪಾಷ, ನಗರ ಕಾರ್ಯದರ್ಶಿ ಕೌಶಾನ್ ಬೇಗ್, ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ರಾಜ್ಯ ಕೋಶಾಧಿಕಾರಿ  ಮುಹಮ್ಮದ್ ಫಾರೂಕ್, ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಮೈಸೂರು ಜಿಲ್ಲಾಧ್ಯಕ್ಷ  ಅಮೀನ್ ಸೇಠ್, ಮೈಸೂರು ಆಲ್-ಇಂಡಿಯಾ ಇಮಾಮ್ ಕೌನ್ಸಿಲ್ ಅಧ್ಯಕ್ಷರಾದ ಮೌಲಾನ ಇಸ್ಮಾಯಿಲ್, ಮೈಸೂರು ಆಲ್-ಇಂಡಿಯಾ ಇಮಾಮ್ ಕೌನ್ಸಿಲ್ ಕಾರ್ಯದರ್ಶಿಯಾದ  ಮೌಲಾನ ಮುದಶ್ಸೀರ್, ಮೈಸೂರು ಆಲ್-ಇಂಡಿಯಾ ಇಮಾಮ್ ಕೌನ್ಸಿಲ್ ಉಪಾಧ್ಯಕ್ಷರಾದ ಮೌಲನಾ ಅಬ್ದ್ರುಹ್‍ಮಾನ್ ಇರಾನಿ ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News