ಎಫ್‌ಡಿಎ, ಎಸ್‌ಡಿಎ ಆಯ್ಕೆಪಟ್ಟಿ ಪ್ರಕಟಿಸಲಿ

Update: 2018-03-14 18:45 GMT

ಮಾನ್ಯರೇ,

ಕರ್ನಾಟಕ ಲೋಕಸೇವಾ ಆಯೋಗವು ಪ್ರಥಮ ದರ್ಜೆ ಸಹಾಯಕರು ಹಾಗೂ ದ್ವೀತಿಯ ದರ್ಜೆ ಸಹಾಯಕರ ಹುದ್ದೆಗಳ ನೇಮಕಕ್ಕೆ ಪರೀಕ್ಷೆ ನಡೆಸಿ ವರ್ಷ ಕಳೆದರೂ ಆಯೋಗವು ಆಯ್ಕೆ ಪಟ್ಟಿಯನ್ನು ಪ್ರಕಟಿಸದೇ ಇರುವುದು ವಿಷಾದನೀಯವಾಗಿದೆ. ಕರ್ನಾಟಕ ಲೋಕಸೇವಾ ಆಯೋಗವು 2016 ಡಿಸೆಂಬರ್ 6 ರಂದು ಪ್ರಥಮ ದರ್ಜೆ ಸಹಾಯಕರು (ಎಫ್‌ಡಿಎ) ಹಾಗೂ ದ್ವೀತಿಯ ದರ್ಜೆ ಸಹಾಯಕರ (ಎಸ್‌ಡಿಎ) ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿತ್ತು. 2017 ಫೆಬ್ರವರಿ 5 ರಿಂದ ಲಿಖಿತ ಪರೀಕ್ಷೆ ನಡೆದಿದ್ದು, ಆಗಸ್ಟ್ ತಿಂಗಳಲ್ಲಿ ಅಭ್ಯರ್ಥಿಗಳ ದಾಖಲೆ ಪರೀಶಿಲನೆಯೂ ಪೂರ್ಣಗೊಂಡಿತ್ತು, ಆದರೆ ಈ ಪ್ರಕ್ರಿಯೆಯ ನಂತರ ಸಂದರ್ಶನ ನಡೆಸಿ ಆಯ್ಕೆಪಟ್ಟಿ ಪ್ರಕಟಿಸುವುದರ ವಿಷಯದಲ್ಲಿ ಆಯೋಗವು ಎಡವಿದೆ.

ಈ ಆಯ್ಕೆ ಪಟ್ಟಿಯನ್ನು ಪ್ರಕಟಿಸುವುದರ ಕುರಿತು ಆಯೋಗವು ಅಭ್ಯರ್ಥಿಗಳಿಗೆ ನಾಲ್ಕೈದು ಬಾರಿ ಭರವಸೆ ನೀಡಿದೆ. ಈಗಲೂ ಕೂಡ ಆಯ್ಕೆಪಟ್ಟಿ ಹೊರ ಬೀಳಲಿದೆ ಎಂಬ ಮಾತನ್ನು ಹೇಳುತ್ತಿವೆ ವಿನಃ ಯಾವುದೇ ಕಾರ್ಯಗಳು ಸಾಧ್ಯವಾಗುತ್ತಿಲ್ಲ. ಇದಕ್ಕೆ ಸಂಬಂಧಿಸಿದಂತೆ ಅಭ್ಯರ್ಥಿಗಳು ಅಧಿಕಾರಿಗಳನ್ನು ಸಂಪರ್ಕಿಸಿದರೆ ಅಧಿಕಾರಿಗಳು ಆಯ್ಕೆ ಪಟ್ಟಿಯನ್ನು ಶೀಘ್ರವೇ ಪ್ರಕಟಿಸುತ್ತೇವೆ ಎನ್ನುತ್ತಿದ್ದಾರೆ. ಆದರೆ ಪ್ರಕಟಿಸುವ ಸೂಚನೆ ಕಾಣುತ್ತಿಲ್ಲ. ಈ ಆಯ್ಕೆಪಟ್ಟಿ ಪ್ರಕಟಿಸುವ ಕುರಿತು ಆಡಳಿತ ಸುಧಾರಣೆ, ಸಿಬ್ಬಂದಿ ಇಲಾಖೆಯು ಕೆಲವೊಂದು ಮಾರ್ಗಸೂಚಿಗಳ ಮೂಲಕ ಅಭ್ಯರ್ಥಿಗಳ ಪ್ರಮಾಣಪತ್ರ, ದೃಢೀಕರಣ ಕುರಿತು ಮೌಖಿಕವಾಗಿ ಸೂಚಿಸಿದ್ದರೂ ಆಯೋಗದ ಕೆಲವೊಂದು ಪರೀಕ್ಷೆ ಫಲಿತಾಂಶಗಳು ತಡವಾಗುತ್ತಿವೆ. ಇದರಿಂದಾಗಿ ಸಾವಿರಾರು ಉದ್ಯೋಗಾಕಾಂಕ್ಷಿಗಳು ವೃಥಾ ಕಾಯುವಂತಹ ಪರಿಸ್ಥಿತಿ ಏರ್ಪಟ್ಟಿದೆ.

ಆದ್ದರಿಂದ ಆದಷ್ಟು ಬೇಗ ಕರ್ನಾಟಕ ಲೋಕಸೇವಾ ಆಯೋಗವು ಆಯ್ಕೆ ಪಟ್ಟಿಯನ್ನು ಪ್ರಕಟಿಸಿ ಅಭ್ಯರ್ಥಿಗಳಲ್ಲಿ ಮೂಡಿರುವಂತಹ ಆತಂಕವನ್ನು ದೂರ ಮಾಡಲಿ.

Writer - ರಾಮು ಎಲ್.ಪಿ, ಲಕ್ಕವಳ್ಳಿ

contributor

Editor - ರಾಮು ಎಲ್.ಪಿ, ಲಕ್ಕವಳ್ಳಿ

contributor

Similar News