ರನ್‌ವೇಯುದ್ದಕ್ಕೂ ಚೆಲ್ಲಾಪಿಲ್ಲಿಯಾಗಿ ಬಿದ್ದ ಚಿನ್ನದ ಗಟ್ಟಿಗಳು!

Update: 2018-03-15 16:43 GMT
ಸಾಂದರ್ಭಿಕ ಚಿತ್ರ

ಮಾಸ್ಕೊ, ಮಾ. 15: ಚಿನ್ನವನ್ನು ಒಯ್ಯುತ್ತಿದ್ದ ಸರಕು ವಿಮಾನವೊಂದು ಹಾರಾಟ ನಡೆಸುತ್ತಿದ್ದಾಗ ಅದರ ಬಾಗಿಲು ಆಕಸ್ಮಿಕವಾಗಿ ತೆರೆದು, ಕನಿಷ್ಠ 3 ಟನ್ ಚಿನ್ನ ರನ್‌ವೇಯಲ್ಲಿ ಚೆಲ್ಲಾಪಿಲ್ಲಿಯಾದ ಘಟನೆಯೊಂದು ವರದಿಯಾಗಿದೆ.

ರಶ್ಯದ ತೀರಾ ಪೂರ್ವದ ನಗರ ಯಕುಸ್ಕ್‌ನಲ್ಲಿ ಈ ಘಟನೆ ಗುರುವಾರ ನಡೆದಿದೆ ಎಂದು ಟಾಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ.

ನಿಂಬಸ್ ಏರ್‌ಲೈನ್ಸ್‌ಗೆ ಸೇರಿದ ವಿಮಾನವೊಂದು 9.3 ಟನ್ ಚಿನ್ನ ಮತ್ತು ಇತರ ಅಮೂಲ್ಯ ಲೋಹಗಳನ್ನು ಹೊತ್ತುಕೊಂಡು ಕ್ರಾಸ್‌ನೊಯಸ್ಕ್‌ಗೆ ಹೋಗಬೇಕಾಗಿತ್ತು.

ವಿಮಾನದ ಬಾಗಿಲ ಚಿಲಕಕ್ಕೆ ಆದ ಹಾನಿಯ ಹಿನ್ನೆಲೆಯಲ್ಲಿ ಅದರ ಬಾಗಿಲು ಆಕಸ್ಮಿಕವಾಗಿ ತೆರೆದುಕೊಂಡಿತು.

3.4 ಟನ್ ತೂಗುವ 172 ಚಿನ್ನದ ಗಟ್ಟಿಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News