ಚೆಕ್ ಬೌನ್ಸ್ ಪ್ರಕರಣ: ಉದ್ಯಮಿಗೆ 20 ಲಕ್ಷ ರೂ. ದಂಡ

Update: 2018-03-16 15:50 GMT

ಮೈಸೂರು,ಮಾ.16: ಚೆಕ್ ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಉದ್ಯಮಿಯೋರ್ವರಿಗೆ ಮೈಸೂರಿನ ನಾಲ್ಕನೇ ಜೆಎಂಎಫ್ ಸಿ ನ್ಯಾಯಾಲಯ 20 ಲಕ್ಷ ರೂ. ದಂಡ ವಿಧಿಸಿದೆ.

ಬೆಂಗಳೂರಿನ ಜೆ.ಪಿ.ನಗರ ನಿವಾಸಿ ಉದ್ಯಮಿ ಸಂಜಯ್ 2005ರಲ್ಲಿ ಮೈಸೂರಿನ ಸಂಭ್ರಮ ಚಿಟ್ಸ್ ಪ್ರೈವೇಟ್ ಲಿಮಿಟೆಡ್ ನಲ್ಲಿ 20ಲಕ್ಷದ ಚೀಟಿ ಪಡೆದಿದ್ದರು. ಹಣ ಮರುಪಾವತಿಸಲು 13.6ಲಕ್ಷದ ಚೆಕ್ ನ್ನು ಸಂಭ್ರಮ ಚಿಟ್ಸ್ ಗೆ ನೀಡಿದ್ದರು. ಆದರೆ ಚೆಕ್ ಬೌನ್ಸ್ ಆದ ಕಾರಣ ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿತ್ತು. ವಿಚಾರಣೆ ನಡೆಸಿದ ನ್ಯಾಯಾಧೀಶರು ತಪ್ಪಿತಸ್ಥರಿಗೆ 20 ಲಕ್ಷರೂ. ದಂಡ ವಿಧಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News