×
Ad

ಹೆಣ್ಣು ಮಕ್ಕಳಿಗೆ ಶಿಕ್ಷಣ ಕೊಡಿಸಿ ಮದುವೆ ಮಾಡಿ: ಡಾ.ರೋಚನಾ ಸಲಹೆ

Update: 2018-03-16 23:13 IST

ಮಂಡ್ಯ, ಮಾ.16: ಗ್ರಾಮೀಣ ಹೆಣ್ಣು ಮಕ್ಕಳಿಗೆ ಪದವಿ ಶಿಕ್ಷಣ ಕೊಡಿಸಿ ನಂತರ ಮದುವೆ ಮಾಡಿ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ.ಎಂ.ಸಿ. ರೋಚನಾ ಸಲಹೆ ನೀಡಿದ್ದಾರೆ.

ನಗರದ ರೈತಸಭಾಂಗಣದಲ್ಲಿ ಎಂ.ಓ.ಬಿ.ಗ್ರಾಮೀಣ ಆರೋಗ್ಯ ಕೇಂದ್ರ ಹಾಗೂ ಆಶ್ರಯ ಮಹಿಳಾ ಒಕ್ಕೂಟ ಶುಕ್ರವಾರ ಆಯೋಜಿಸಿದ್ದ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಹೆಣ್ಣುಮಕ್ಕಳನ್ನು ಉನ್ನತ ಶಿಕ್ಷಣದವರೆಗೆ ಓದಿಸಿ, ನಂತರ ಪೋಕಷಕರು ಮದುವೆಗೆ ಮುಂದಾಗಬೇಕಿದೆ. ಮಾನಸಿಕ ಮತ್ತು ದೈಹಿಕ ಬೆಳೆವಣಿಗೆ ಇಲ್ಲದೆ ನಾನಾ ತೊಂದರೆಗಳನ್ನು ಎದುರಿಸುವುದನ್ನು ತಪ್ಪಿಸಬೇಕಿದೆ ಎಂದು ಅವರು ಹೇಳಿದರು.

ವಿದ್ಯೆಯಿಂದ ಜ್ಞಾನ ಬೆಳೆಯುತ್ತದೆ, ಜ್ಞಾನದಿಂದ ಸಾಮಾಜಿಕವಾಗಿ ಪ್ರಬುದ್ದರಾಗುತ್ತಾರೆ, ಉತ್ತಮ ಸಮಾಜ ಮತ್ತು ಕುಟುಂಬ ನಿರ್ವಾಣೆಯಲ್ಲಿ ತೊಡಸಿಕೊಳ್ಳುತ್ತಾರೆ, ಇಂತಹ ಉತ್ತಮ ವಾತಾರವಣವನ್ನು ನಿರ್ಮಿಸಬೇಕಿದೆ ಎಂದು ಅವರು ತಿಳಿಸಿದರು.

ಜಿಲ್ಲಾ ಜೆಡಿಎಸ್‍ನ ಯುವ ಅಧ್ಯಕ್ಷ ಅಶೋಕ್ ಜಯರಾಂ, ಜೆಡಿಎಸ್ ಮುಖಂಡ ರವೀಂದ್ರ ಶ್ರೀಕಂಠಯ್ಯ, ಫಾ.ನೆಹರು ಮುತ್ತು, ಎಂಓಬಿ ನಿರ್ದೇಶಕಿ ಸಿಸ್ಟರ್ ಪ್ರಿಂಟೋ, ಆಶ್ರಯ ಮಹಿಳಾ ಒಕ್ಕೂಟದ ಅಧ್ಯಕ್ಷೆ ಚಿಕ್ಕತಾಯಮ್ಮ, ನಗರಸಭೆ ಸದಸ್ಯೆ ಚಂದ್ರಕಲಾ, ಸಿಸ್ಟರ್ ಪ್ಲೋಮಿ, ಸಿಸ್ಟರ್ ಆಲಿಸ್, ಜಿಪಂ ಮಾಜಿ ಅಧ್ಯಕ್ಷ ತಗ್ಗಹಳ್ಳಿ ವೆಂಕಟೇಶ್, ಕೊತ್ತತ್ತಿ ರಾಜು, ಭಾಸ್ಕರ್, ಅಧಿಕಾರಿ ರಾಮಕೃಷ್ಣಯ್ಯ, ಇತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News