ಚೀನಾದ ಅಧ್ಯಕ್ಷರಾಗಿ ಕ್ಸಿಜಿನ್ ಎರಡನೆ ಅವಧಿಗೆ ಪುನರಾಯ್ಕೆ

Update: 2018-03-17 17:42 GMT

ಬೀಜಿಂಗ್,ಮಾ.17: ಚೀನಾದ ಅಧ್ಯಕ್ಷರಾಗಿ ಕ್ಸಿಜಿನ್‌ಪಿಂಗ್‌ರನ್ನು ಐದು ವರ್ಷಗಳ ಎರಡನೆ ಅವಧಿಗೆ, ಚೀನಾದ ಸಂಸತ್ ಶನಿವಾರ ಪುನರಾಯ್ಕೆ ಮಾಡಿದೆ. ಚೀನಾದ ಅಧ್ಯಕ್ಷರ ಅಧಿಕಾರವನ್ನು ಎರಡು ಅವಧಿಗೆ ಸೀಮಿತಗೊಳಿಸುವ ಕಾನೂನನ್ನು ರದ್ದುಪಡಿಸಿ, ಅವರು ಜೀವನಪರ್ಯಂತ ಹುದ್ದೆಯಲ್ಲಿ ಮುಂದುವರಿಯಲು ಅವಕಾಶ ನೀಡಿದ ಕೆಲವೇ ದಿನಗಳ ಬಳಿಕ ಕ್ಸಿಜಿನ್‌ರನ್ನು ಎರಡನೆ ಅವಧಿಗೆ ಪುನರಾಯ್ಕೆ ಮಾಡಲಾಗಿದೆ.

  ಚೀನಾದ ರಾಷ್ಟ್ರೀಯ ಸಂಸತ್ ಇಂದು 64 ವರ್ಷ ಕ್ಸಿ ಜಿನ್ ಅವರನ್ನು ಚೀನಾದ ಇಪ್ಪತ್ತು ಲಕ್ಷ ಸಂಖ್ಯಾಬಲದ ಚೀನಿ ಸೇನೆಯ ಸರ್ವೋಚ್ಛ ಹೈಕಮಾಂಡ್ ಆಗಿರುವ ಕೇಂದ್ರೀಯ ಮಿಲಿಟರಿ ಆಯೋಗದ ವರಿಷ್ಠರನ್ನಾಗಿ ಸಂಸತ್ ಪುನರಾಯ್ಕೆ ಮಾಡಿದೆ.

ಕ್ಸಿಜಿನ್ ಅವರು ಕಳೆದ ವರ್ಷದ ಅಕ್ಟೋಬರ್‌ನಲ್ಲಿ ಆಡಳಿತಾರೂಢ ಚೀನಾ ಕಮ್ಯೂನಿಸ್ಟ್ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದರು.

ಕ್ಸಿ ಅವರಿಗೆ ನಿಷ್ಠಾವಂತ ಬೆಂಬಲಿಗ 69 ವರ್ಷದ ವಾಂಗ್ ಕ್ವಿಶಾನ್‌ರನ್ನು ಚೀನಾದ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಕ್ಸಿ ಅವರಂತೆ ವಾಂಗ್ ಕ್ವಿಶಾನ್ ಕೂಡಾ ಅಜೀವ ಅವಧಿಗೆ ಚೀನಾದ ಉಪಾಧ್ಯಕ್ಷರಾಗಿ ಮುಂದುವರಿಯುವ ಸಾಧ್ಯತೆಗಳಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News