ಸರ್ಕಾರ ಇಬ್ಬರನ್ನೂ ಸಮಾಧಾನ ಮಾಡುವ ಕೆಲಸ ಮಾಡಿದೆ: ಶಾಮನೂರು ಶಿವಶಂಕರಪ್ಪ
Update: 2018-03-19 21:46 IST
ದಾವಣಗೆರೆ,ಮಾ.19: ಸರ್ಕಾರದ ಸಚಿವ ಸಂಪುಟದಲ್ಲಿ ತೆಗೆದುಕೊಂಡ ಇಂದಿನ ನಿರ್ಧಾರವನ್ನು ಅಖಿಲ ಭಾರತ ವೀರಶೈವ ಮಹಾಸಭಾ ಒಪ್ಪಿಕೊಳ್ಳಲಿದೆ ಎಂದು ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ, ಶಾಸಕ ಶಾಮನೂರು ಶಿವಶಂಕರಪ್ಪ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರ ಇಂದು ಇಬ್ಬರನ್ನೂ ಸಮಾಧಾನ ಮಾಡುವ ಕೆಲಸ ಮಾಡಿದೆ. ಲಿಂಗಾಯಿತ ಪ್ರತ್ಯೇಕ ಧರ್ಮದ ಕುರಿತು ತಜ್ಞರು ಸಲ್ಲಿಸಿದ ವರದಿ ಮೂಲೆ ಗುಂಪಾಗಿದೆ. ವೀರಶೈವ ಲಿಂಗಾಯಿತ ಬಸವತತ್ವ ಎಲ್ಲವೂ ಸೇರಿ 3ಬಿ ಗೆ ಶಿಫಾರಸ್ಸು ಮಾಡುವ ಕುರಿತು ಸಮಾಜದ ಮುಖಂಡರನ್ನು ಕರೆದು ಮುಂದಿನ ದಿನಗಳಲ್ಲಿ ಈ ಬಗ್ಗೆ ಚರ್ಚೆ ಮಾಡುತ್ತೇವೆ. 2ಬಿ ಸ್ಥಾನಮಾನ ಅದು ಶೈಕ್ಷಣಿಕ ಉದ್ದೇಶಕ್ಕೆ ಮಾತ್ರವೇ ಹೊರತು ಅದು ಉದ್ಯೋಗಕ್ಕೆ ಸೀಮಿತವಾಗಿಲ್ಲ ಎಂದ ಅವರು, ಈ ಮೂಲಕ ಸರ್ಕಾರ ತನ್ನ ತಲೆನೋವು ಕಳೆದು ಕೊಂಡಿದೆ ಎಂದರು.