ದಲಿತ ಯುವಕನ ಅನುಮಾನಾಸ್ಪದ ಸಾವು: ಸೂಕ್ತ ತನಿಖೆ ನಡೆಸುವಂತೆ ತಾ.ಪಂ.ಸದಸ್ಯ ಒತ್ತಾಯ

Update: 2018-03-20 16:28 GMT

ಮೈಸೂರು,ಮಾ. 20: ದಲಿತ ಯುವಕಯೋರ್ವ ನಂಜನಗೂಡು ಶ್ರೀಶ್ರೀಕಂಠೇಶ್ವರ ದೇವಸ್ಥಾನದ ಮುಂಭಾಗ ಕಪಿಲಾ ನದಿಯ ಮುಡಿಕಟ್ಟೆ ಬಳಿ  ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ.

ಮೈಸೂರು ತಾಲ್ಲೂಕು ಜಯಪುರ ಹೋಬಳಿ ಹಾರೋಹಳ್ಳಿ ಗ್ರಾಮದ ಮೂರ್ತಿ(27) ಎಂಬ ಯುವಕನೇ ಮಂಗಳವಾರ ಬೆಳಿಗ್ಗೆ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾನೆ. ಈತ ಸೋಮವಾರ ನಂಜನಗೂಡು ಶ್ರೀಶ್ರೀಕಂಠೇಶ್ವರ ಸ್ವಾಮಿ ದೇವಸ್ಥಾನಕ್ಕೆ ಬಂದು ದೇವರ ದರ್ಶನ ಪಡೆದಿದ್ದಾನೆ. ನಂತರ ಇಲ್ಲೇ ವಾಸ್ತವ್ಯ ಹೂಡಿದ್ದ ಆತ ಇಂದು ಬೆಳಿಗ್ಗೆಯೊಳಗೆ ಮುಡಿಕಟ್ಟೆಯ ಮುಂಭಾಗದ ಫುಟ್‍ಪಾತ್‍ನಲ್ಲಿ ಸಾವೀಗೀಡಾಗಿ ಬಿದ್ದಿದ್ದಾನೆ.  

ಈ ಸಂಬಂಧ ಮೃತನ ತಂದೆ ಪಾಪಯ್ಯ ತನ್ನ ಮಗನ ಎರಡೂ ಕಾಲುಗಳು ಅಂಗವೈಪಲ್ಯಕ್ಕೆ ಒಳಗಾಗಿದ್ದು, ಆತ ಜಯಪುರ ನಾಡಕಚೇರಿ ಹಾಗೂ ಮೈಸೂರು ತಾಲ್ಲುಕು ಕಚೇರಿ ಮುಂದೆ ಅರ್ಜಿ ಬರೆದುಕೊಂಡು ಸ್ವತಂತ್ರವಾಗಿ ಜೀವನ ನಡೆಸುತ್ತಿದ್ದ. ಆತನಿಗೆ ಯಾವುದೇ ತೊಂದರೆ ಇರಲಿಲ್ಲ ಅಂತಹದರಲ್ಲಿ ಈತ ಸಾವನ್ನಪ್ಪಿರುವುದು ಅನುಮಾನ ಮೂಡಿಸುತ್ತಿದೆ. ಜೊತೆಗೆ ಈತನ ಎರಡೂ ಕಿವಿಗಳಲ್ಲಿ ರಕ್ತ ಬರುತ್ತಿರುವುದು ಕಂಡು ಬಂದಿದ್ದು. ಈತನಿಗೆ ಯಾರೋ ಹೊಡೆದು ಸಾಯಿಸಿದ್ದಾರೆ ಎಂಬ ಅನುಮಾನವನ್ನು ವ್ಯಕ್ತಪಡಿಸಿ ನಂಜನಗೂಡು ಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಈ ಸಂಬಂಧ ನಂಜನೂಡು ಟೌನ್ ಪೊಲೀಸರು ಪ್ರಕರಣ ದಾಖಲಸಿಕೊಂಡು  ವೃತ್ತ ನಿರೀಕ್ಷಕ ವೆಂಕಟೇಶ್ ಮಾರ್ಗದರ್ಶನದಲ್ಲಿ ಸಬ್‍ಇನ್ಸ್‍ಪೆಕ್ಟರ್ ಸವಿ ತನಿಖೆ ಕೈಗೊಂಡಿದ್ದಾರೆ.

ಸೂಕ್ತ ತನಿಖೆ ನಡೆಸುವಂತೆ ತಾ.ಪಂ.ಸದಸ್ಯನ ಒತ್ತಾಯ: ಓರ್ವ ದಲಿತ ಯುವಕನ ಸಾವು ಅನುಮಾನಕ್ಕೆ ಎಡೆಮಾಡಿಕೊಟ್ಟಿದ್ದು. ಪೊಲೀಸರು ಸೂಕ್ತ ತನಿಖೆ ನಡೆಸಿ ಸಾವಿನ ಬಗ್ಗೆ ನಿಖರವಾದ ಮಾಹಿತಿಯನ್ನು ನೀಡಬೇಕು ಇಲ್ಲದೆ ಇದ್ದಲ್ಲಿ ದಲಿತ ಸಂಘರ್ಷ ಸಮಿತಿ ಜೊತೆಗೂಡಿ ಉಗ್ರ ಹೋರಾಟ ಮಾಡಲಾಗುವುದು ಎಂದು ಹಾರೋಹಳ್ಳಿ ತಾ.ಪಂ.ಸದಸ್ಯ ಸುರೇಶ್‍ಕುಮಾರ್ ಒತ್ತಾಯ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News