ಪ್ರಭಾರಿ ಉಪತಹಶೀಲ್ದಾರ್ ಕಚೇರಿಗೆ ಎಸಿಬಿ ದಾಳಿ: ದಾಖಲೆ ಪರಿಶೀಲನೆ
ಕಳಸ, ಮಾ.20: ಇಲ್ಲಿಯ ನಾಡಕಚೇರಿ ಪ್ರಭಾರಿ ಉಪತಹಶೀಲ್ದಾರ್ ಕೀರ್ತಿಜೈನ್ ಮನೆ, ಕಚೆೇರಿ,ಸಂಬಂಧಿಕರ ಮೇಲೆ ಏಕಕಾಲದಲ್ಲಿ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಫಾರಂ ನಂ 50/53ಯಲ್ಲಿ ವಂಚನೆ ಹಾಗೂ ಅಪಾರ ಪ್ರಮಾಣದ ಅಕ್ರಮ ಆಸ್ತಿಪಾಸ್ತಿ ಹೊಂದಿದ್ದರು ಎನ್ನುವ ಆರೋಪದ ಹಿನ್ನ್ನೆಲೆಯಲ್ಲಿ ಮಂಗಳವಾರ ಬೆಳಗ್ಗೆ ಸುಮಾರು 9:15ರ ಸಮಯದಲ್ಲಿ ಕಳಸ ನಾಡ ಕಚೇರಿ,ಸಂಸೆಯ ಬಾಲ್‌ಗಲ್‌ನಲ್ಲಿರುವ ಕೀರ್ತಿ ಜೈನ್ ಅವರ ಮನೆ, ಸಂಸೆಯಲ್ಲಿರುವ ಅವರ ಸಂಬಂಧಿಕರ ಮನೆ, ದಕ್ಷಿಣ ಕನ್ನಡದ ಎರಡು ಕಡೆ ಏಕಕಾಲದಲ್ಲಿ ದಾಳಿ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ದಾಳಿ ನಡೆಸಿದ ಅಧಿಕಾರಿಗಳು ಕಳಸದ ನಾಡ ಕಚೇರಿಯಲ್ಲಿ ಎರಡೂವರೆ ಗಂಟೆಗಳ ಕಾಲ ಕಚೇರಿಯಲ್ಲಿ ಕಡತಗಳನ್ನು ಪರಿಶೀಲನೆ ನಡೆಸಿದ್ದಾರೆ.ಅಲ್ಲದೆ ಕೀರ್ತಿ ಜೈನ್ ಹಾಗೂ ಅವರ ಸಂಬಂಧಿಕರ ಮನೆಯಲ್ಲಿ ಮೂಲ ದಾಖಲಾತಿಗಳನ್ನು ಪರಿಶೀಲನೆ ಮಾಡಿ, ವಶಪಡಿಸಿಕೊಂಡಿದ್ದಾರೆ ಎನ್ನಲಾಗುತ್ತಿದೆ.
ದಾಳಿ ಸಂದರ್ಭದಲ್ಲಿ ಪಶ್ಚಿಮ ವಲಯ ಎಸಿಬಿ ಎಸ್ಪಿ ಶೃತಿ, ಚಿಕ್ಕಮಗಳೂರು ಎಸಿಬಿ ಡಿವೈಎಸ್ಪಿ ನಾಗೇಶ್,ಮಂಗಳೂರು ಡಿವೈಎಸ್ಪಿ ಸುಧೀರ್,ಉಡುಪಿ ಡಿವೈಎಸ್ಪಿ ದಿನಕರ ಶೆಟ್ಟಿ, ಚಿಕ್ಕಮಗಳೂರು ಪೊಲೀಸ್ ಇನ್‌ಸ್ಪೆಕ್ಟರ್ ಬ್ರಿಜೇಶ್ ಮ್ಯಾಥ್ಯೂ ಇದ್ದರು.