×
Ad

ಹನೂರು: ಬ್ಲಾಕ್ ಕಾಂಗ್ರೇಸ್ ನೂತನ ಮಹಿಳಾ ಘಟಕದ ಅಧ್ಯಕ್ಷೆಯಾಗಿ ರಾಧಮಣಿ ಷಣ್ಮುಗಮ್‍ ನೇಮಕ

Update: 2018-03-20 22:58 IST

ಹನೂರು, ಮೆ. 20: ಲೋಕ್ಕನಹಳ್ಳಿ ಜಿಲ್ಲಾ ಪಂಚಾಯತ್  ಕ್ಷೇತ್ರದ ಮಾಜಿ ಸದಸ್ಯೆಯಾದ ರಾಧಮಣಿ ಷಣ್ಮುಗಮ್‍ರವರನ್ನು ಹನೂರು ಬ್ಲಾಕ್ ಕಾಂಗ್ರೇಸ್  ನೂತನ ಮಹಿಳಾ ಘಟಕದ  ಅಧ್ಯಕ್ಷೆಯಾಗಿ ನೇಮಕಮಾಡಲಾಗಿದೆ.

ಪಟ್ಟಣದ ಕಾಂಗ್ರೇಸ್ ಕಚೇರಿಯಲ್ಲಿ ರಾಧಮಣಿ ಷಣ್ಮಗಮ್‍ರವರಿಗೆ ಶಾಸಕ ಆರ್ ನರೇಂದ್ರರಾಜೂಗೌಡ ಅಭಿನಂದಿಸಿ ನೂತನ ಅಧ್ಯಕ್ಷೆಗೆ ಶುಭಕೋರಿದರು. 
ನಂತರ  ಸುದ್ದಿಗಾರರೂಂದಿಗೆ ಮಾತನಾಡಿದ ರಾಧಮಣಿ ಷಣ್ಮಗಮ್ ನೂತನ ಹನೂರು ಬ್ಲಾಕ್ ಕಾಂಗ್ರೇಸ್ ಮಹಿಳಾ ಘಟಕದ  ಅಧ್ಯಕ್ಷೆಯಾಗಿರುವುದು ನನಗೆ ತುಂಬಾ ಸಂತಸ ತಂದಿದೆ, ನನ್ನ ಜವಬ್ದಾರಿಯನ್ನು  ಅರಿತು  ಇನ್ನು ಕೆಲವೇ ದಿನಗಳಲ್ಲಿ ಚುನಾವಣೆ ಸಮೀಪಿಸುತ್ತಿರುವುದರಿಂದ  ಮಹಿಳಾ ಘಟಕದ ವತಿಯಿಂದ ಪ್ರತಿ ಮನೆ ಮನೆಗೂ ತೆರಳಿ ಸಕ್ರಿಯವಾಗಿ ಪ್ರಚಾರ ಕೈಗೂಂಡು ಪಕ್ಷ ಸಂಘಟನೆಮಾಡಲಾಗುವುದು, ಕ್ಷೇತ್ರದಲ್ಲಿ ಪುರಷ ಮತದಾರಷ್ಟೇ  ಮಹಿಳಾ ಮತದಾರರು ಇರುವುದರಿಂದ ಮಹಿಳಾ ಘಟಕವನ್ನು ಸದೃಡವಾಗಿ  ಸಂಘಟನೆ ಮಾಡುವುದರ ಜೊತೆಗೆ ಮಹಿಳೆಯರನ್ನು  ಹೆಚ್ಚು ಕಾಂಗ್ರೇಸ್ ಪಕ್ಷಕ್ಕೆ ಸೇರಿಸಿಕೂಳ್ಳಲು ಕಾರ್ಯಕ್ರಮಗಳನ್ನು ರೂಪಿಸಲಾಗುವುದು ಎಂದರು.

ಇದೇ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೇಸ್ ಚುನಾವಣೆ ಉಸ್ತುವಾರಿ ನರೇಂದ್ರ ,  ರಾಜ್ಯ ಉಪ್ಪಾರ ನಿಗಮದ ಅದ್ಯಕ್ಷ ಶಿವುಕುಮಾರ್ ,ಚಾಮುಲ್  ಅದ್ಯಕ್ಷ ಗುರುಮಲ್ಲಪ್ಪ,  ಜಿಪಂ ಸದಸ್ಯರಾದ ಬಸವರಾಜು , ಮರಗದಮಣಿ , ಶಿವಮ್ಮ , ತಾಪಂ ಅದ್ಯಕ್ಷ ರಾಜು , ಪಪಂ ಅದ್ಯಕ್ಷೆ ಮಮತಾಮಹದೇವ್ , ಉಪಾದ್ಯಕ್ಷ ಬಸವರಾಜು , ಲೋಕ್ಕನಹಳ್ಳಿ ಗ್ರಾಪಂ ಅದ್ಯಕ್ಷ ರಂಗಶೆಟ್ಟಿ ಹನೂರು  ಮತ್ತು ಬ್ಲಾಕ್ ಕಾಂಗ್ರೇಸ್ ಅದ್ಯಕ್ಷರುಗಾಳಾದ ಈಶ್ವರ್, ಕೆಂಪಯ್ಯ , ಕಾರ್ಯದರ್ಶಿ ಸಿದ್ದರಾಜು , ಹನೂರು ಬ್ಲಾಕ್ ಕಾಂಗ್ರೇಸ್ ಮಹಿಳಾ ಅದ್ಯಕ್ಷ ರಾಧಮಣಿಷಣ್ಮಗಮ್ , ರಾಮಪುರ ಬ್ಲಾಕ್ ಕಾಂಗ್ರೇಸ್ ಅದ್ಯಕ್ಷೆ ಅತಿಯಾಪೆರೋಜ್   ಮುಖಂಡರಾದ ಚಿಕ್ಕತಮ್ಮಯ್ಯಗೌಡ , ರವಿಕುಮಾರ್, ಮಾದೇಶ್ ನಟರಾಜು , ಕೃಷ್ಣ  ಇನ್ನಿತರರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News