ಮಡಿಕೇರಿ: ವಿವಿಧ ಕಾಮಗಾರಿಗೆ ಶಾಸಕ ಬೋಪಯ್ಯ ಚಾಲನೆ

Update: 2018-03-20 17:44 GMT

ಮಡಿಕೇರಿ, ಮಾ. 20: ಹಾಕತ್ತೂರು ಗ್ರಾಪಂ ವ್ಯಾಪ್ತಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕು ಸ್ಥಾಪನೆಯನ್ನು ಶಾಸಕ ಕೆ.ಜಿ.ಬೋಪಯ್ಯ ನೆರವೇರಿಸಿದರು.

 ಹಾಕತ್ತೂರು ಗವತಿ ದೇವಸ್ಥಾನ ರಸ್ತೆ 3ಲಕ್ಷ ರೂ., ಶ್ರೀಈಶ್ವರ ದೇವಸ್ಥಾನ ರಸ್ತೆ 3ಲಕ್ಷ ರೂ., ಕಗ್ಗೋಡ್ಲು-ಹುಲಿತಾಳ ರಸ್ತೆ 3ಲಕ್ಷ ರೂ., ಕಗ್ಗೋಡ್ಲು, ನೀರುಕೊಲ್ಲಿ ರಸ್ತೆ 3 ಲಕ್ಷ ರೂ., ಹಾಕತ್ತೂರು, ಉದಿಯಂಡ ಕುಟುಂಬಸ್ಥರಿಗೆ ಚೂರಿಕಾಡು ರಸ್ತೆ 3.5 ಲಕ್ಷ ರೂ., ತೊಂಬತ್ತು ಮನೆಯ ಕಾಂಕ್ರಿಟ್ ರಸ್ತೆ 4 ಲಕ್ಷ ರೂ., ಸುನೀಲ್ ಕುಟುಂಬಸ್ಥರ ಮನೆಗೆ ತೆರಳುವ ರಸ್ತೆ 2 ಲಕ್ಷ ರೂ., ಕಗ್ಗೋಡ್ಲು, ಹುಲಿತಾಳ ಮರುಡಾಂಬರೀಕರಣ 8 ಲಕ್ಷ ರೂ., ಸರಕಾರಿ ಪ್ರೌಢಶಾಲೆಯ ಆಟದ ಮೈದಾನಕ್ಕೆ ಗ್ಯಾಲರಿ ನಿರ್ಮಾಣ ಹಾಗೂ ಕಗ್ಗೋಡ್ಲು, ನೀರು ಕೊಲ್ಲಿ ರಸ್ತೆ 4 ಲಕ್ಷ ರೂ., ಬಡ್ಡನ ಕುಟುಂಬ 2 ಲಕ್ಷ ರೂ., ಸುಮಾರು 3 ಲಕ್ಷ ರೂ. ವೆಚ್ಚದ ಹೂಕಾಡು ಪೈಸಾರಿ ಆಟದ ಮೈದಾನದ ತಡೆಗೋಡೆ ಕಾಮಗಾರಿಗೆ ಚಾಲನೆ ನೀಡಲಾಯಿತು.

ಈ ಸಂದರ್ಭದಲ್ಲಿ ಜಿಪಂ ಅಧ್ಯಕ್ಷ ಬಿ.ಎ.ಹರೀಶ್, ಗ್ರಾಪಂ ಅಧ್ಯಕ್ಷರಾದ ಮಂದ್ರೀರ ಶಾರದ, ಉಪಾಧ್ಯಕ್ಷ ಪಿ.ಎಸ್.ವಿಷ್ಣುಕುಮಾರ್, ಸದಸ್ಯರಾದ ಪಿ.ಇ.ದೇವಿಪ್ರಸಾದ್, ಹೇಮಾವತಿ, ಪಿಯೂಸ್ ಪೆರೆರಾ, ತಾಪಂ ಸದಸ್ಯೆ ಕುಮುದಾ ರಶ್ಮಿ, ಕೋಡಿ ಪ್ರಸನ್ನ, ಪಿ.ಪಿ.ಸುಕುಮಾರ್, ಕುಂಜಿಲನ ಮಧು ಮೋಹನ್ ಹಾಗೂ ಗ್ರಾಮಸ್ಥರು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News