ಶಿಕ್ಷಕರು ಕಲಾವಿದರಾಗಬೇಕು: ಶಾಸಕ ಜಿ.ಟಿ. ದೇವೇಗೌಡ

Update: 2018-03-20 18:21 GMT

ಮೈಸೂರು, ಮಾ.20: ಶಿಕ್ಷಕರು ವಿದ್ಯಾರ್ಥಿಗಳಿಗೆ ಕೇವಲ ಶಿಕ್ಷಣವನ್ನಷ್ಟೇ ಕೊಡುವುದಲ್ಲ. ಶಿಕ್ಷಕರೂ ಕಲಾವಿದರಾಗಬೇಕು. ಹಾಗಾದಾಗ ಆ ಶಿಕ್ಷಣ ಸಂಸ್ಥೆಯಲ್ಲಿ ಮಕ್ಕಳು ಕಲೆಯನ್ನು ಉಳಿಸುತ್ತಾರೆ ಎಂದು ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡ ಹೇಳಿದ್ದಾರೆ.

ನಗರದ ಕಲಾಮಂದಿರದ ಸುಚಿತ್ರ ಆರ್ಟ್ ಗ್ಯಾಲರಿಯಲ್ಲಿ ಕಲಾನಿಕೇತನ ಸ್ಕೂಲ್ ಆಫ್ ಆರ್ಟ್‌ನ ಹಳೆಯ ವಿದ್ಯಾರ್ಥಿಗಳ ವೈವಿಧ್ಯಮಯ ಸಮಾರಂಭ, ಚಿತ್ರಕಲಾ ಪ್ರದರ್ಶನವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕಲಾವಿದರು, ಕಲಾ ವಿದ್ಯಾರ್ಥಿಗಳು ಕಲೆಯನ್ನು ಉಳಿಸಿ ಬೆಳೆಸಲು ಶ್ರಮಿಸಬೇಕು. ಕಲಾಶಿಕ್ಷಕರು ಕಲೆಯನ್ನು ಉಳಿಸಲು ಮಾರ್ಗದರ್ಶನ ನೀಡಬೇಕು ಎಂದು ಕಿವಿಮಾತು ಹೇಳಿದರು.

ಕಾರ್ಯಕ್ರಮದಲ್ಲಿ ಕಲಾನಿಕೇತನ ಸ್ಕೂಲ್ ಆಫ್ ಆರ್ಟ್ ನ ಉಪನ್ಯಾಸಕ ಡಾ.ವಿಠಲರೆಡ್ಡಿ ಚುಳುಕಿ, ಕರ್ನಾಟಕ ಲಲಿತಕಲಾ ಅಕಾಡೆಮಿಯ ಸದಸ್ಯ ಡಾ.ಸುರೇಂದ್ರನಾಥ್ ಡಿ.ಆರ್, ಸಿಂಡಿಕೇಟ್ ಸದಸ್ಯ ರಂಗನಾಥ್ ಡಿ.ಕೆ, ಕರ್ನಾಟಕ ಲಲಿತಕಲಾ ಅಕಾಡಮಿಸದಸ್ಯರಾದ ಅಭಿಲಾಷ್ ಡಿ, ಶಾಂತಾಬಾಯಿ ಅವರನ್ನು ಸನ್ಮಾನಿಸಲಾಯಿತು. ಈ ಸಂದರ್ಭ ಹಿರಿಯ ಕಲಾವಿದ ಜಂಬುಕೇಶ್ವರ್, ಡಾ.ಜಿ.ಎಂ.ವಾಮದೇವ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News