ಶೃಂಗೇರಿ ಶಾರದಾಂಬೆ ದರ್ಶನ ಪಡೆದ ರಾಹುಲ್

Update: 2018-03-21 15:28 GMT

ಚಿಕ್ಕಮಗಳೂರು, ಮಾ.21: ಜನಾಶೀರ್ವಾದ ಸಮಾವೇಶದ ಹಿನ್ನೆಲೆಯಲ್ಲಿ ಬುಧವಾರ ಬೆಳಗ್ಗೆ 12ಕ್ಕೆ ಹೆಲಿಕಾಪ್ಟರ್ ಮೂಲಕ ಮಂಗಳೂರಿನಿಂದ ರಾಹುಲ್ ಗಾಂಧಿ ಶೃಂಗೇರಿಗೆ ಬಂದು ಶೃಂಗೇರಿ ಶಾರದಾಂಬೆಯ ದರ್ಶನ ಮಾಡಿದರು.

ಶೃಂಗೇರಿಯ ಹೆಲಿಪ್ಯಾಡ್‍ನಿಂದ ನೇರವಾಗಿ ಶೃಂಗೇರಿ ದೇವಾಲಯಕ್ಕೆ ತೆರಳಿದ ರಾಹುಲ್ ದೇವಿಯ ದರ್ಶನದ ನಂತರ ದೇವಾಲಯದ ಸಮೀಪದಲ್ಲಿರುವ ಭದ್ರಾನದಿಯಲ್ಲಿ ಮೀನುಗಳಿಗೆ ಆಹಾರ ಹಾಕಿದರು. ಈ ವೇಳೆ ಸಿಎಂ ಸಿದ್ದರಾಮಯ್ಯ, ಪರಮೇಶ್ವರ್, ವೇಣುಗೋಪಾಲ್, ಮತ್ತಿತರರ ಮುಖಂಡರು ಸಾಥ್ ನೀಡಿದರು. ಮಠದ ಆವರಣಕ್ಕೆ ತೆರಳಿದ ರಾಹುಲ್ ಶಂಕರಾಚಾರ್ಯರ ದರ್ಶನ ಪಡೆದು ಶೃಂಗೇರಿಯ ಜಗದ್ಗುರುಗಳಿಂದ ಆಶೀರ್ವಾದ ಪಡೆದು ಸುಮಾರು 15 ನಿಮಿಷಗಳ ಕಾಲ ಏಕಾಂಗಿಯಾಗಿ ಮಾತುಕತೆ ನಡೆಸಿದರು. ಬಳಿಕ ಮಠದ ಆವರಣಲ್ಲಿರುವ ವೇದ, ಸಂಸ್ಕೃತ ಶಾಲೆಯ ಮಕ್ಕಳೊಂದಿಗೆ ರಾಹುಲ್ ಸಂವಾದ ನಡೆಸಿದರು. 

ನಂತರ ಮಠದಿಂದ ಹೊರಬಂದ ಅವರು, ಪಟ್ಟಣದಲ್ಲಿ ಕಾಂಗ್ರೆಸ್ ಪಕ್ಷದ ನೂತನ ಕಚೇರಿಯನ್ನು ಉದ್ಘಾಟಿಸಿ ಮಧ್ಯಾಹ್ನ ಹೆಲಿಕಾಪ್ಟರ್ ಮೂಲಕ ಚಿಕ್ಕಮಗಳೂರಿಗೆ ಆಗಮಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News