ಬಿಜೆಪಿ ಸೇರ್ಪಡೆ ವದಂತಿ ಬಗ್ಗೆ ಶಾಮನೂರು ಶಿವಶಂಕರಪ್ಪ ಹೇಳಿದ್ದೇನು?
Update: 2018-03-21 14:54 IST
ದಾವಣಗೆರೆ, ಮಾ.21: ಲಿಂಗಾಯತ ಪ್ರತ್ಯೇಕ ಧರ್ಮ ವಿಚಾರಲ್ಲಿ ಅಸಮಾಧಾನಗೊಂಡಿರುವ ಶಾಮನೂರು ಶಿವಶಂಕರಪ್ಪ ಬಿಜೆಪಿ ಸೇರ್ಪಡೆಯಾಗಲಿದ್ದಾರೆ ಎನ್ನುವ ವರದಿಗಳನ್ನು ಶಿವಶಂಕರಪ್ಪ ನಿರಾಕರಿಸಿದ್ದಾರೆ.
ನಾನಾಗಲೀ, ನನ್ನ ಪುತ್ರ ಸಚಿವ ಸಚಿವ ಎಸ್ ಎಸ್ ಮಲ್ಲಿಕಾರ್ಜುನ್ ಆಗಲೀ ಬಿಜೆಪಿ ಸೇರುತ್ತಿದ್ದೇವೆ ಎನ್ನುವುದು ಸುಳ್ಳು. ಇದೆಲ್ಲ ವದಂತಿ. ಯಾರು ಏನೇ ಹೇಳಲಿ ಬಿಜೆಪಿ ಸೇರುವ ಮಾತಿಲ್ಲ.
ಲಿಂಗಾಯತ ಪ್ರತ್ಯೇಕ ಧರ್ಮ ಶಿಫಾರಸಿಂದ ನನಗೇನು ಬೇಜಾರಾಗಿಲ್ಲ. ಈ ಬಗ್ಗೆ ಮಾರ್ಚ್ 23 ರಂದು ಬೆಂಗಳೂರಿನಲ್ಲಿ ವೀರಶೈವ ಮಹಾಸಭೆಯ ಸಭೆ ನಡೆಸುತ್ತೇವೆ. ಇವೆಲ್ಲ ವದಂತಿಗಳಿಗೆ ಕಿವಿಗೊಡಬೇಡಿ.
ಬಿಜೆಪಿಯಲ್ಲಿ ಯಾರಾದರೂ ಜೈಲಿಗೆ ಹೋಗದೆ ಇದ್ದವರು ಇದ್ರೆ ಕಾಂಗ್ರೆಸ್ ಗೆ ಬರಲಿ ಎಂದವರು ಹೇಳಿದರು.