×
Ad

ಮುಂದಿನ ಚುನಾವಣೆಯಲ್ಲಿ ಅತ್ಯಧಿಕ ಮತಗಳಿಂದ ಗೆಲುವು ಸಾಧಿಸಲಿದ್ದೇನೆ: ಬಿಎಸ್ಪಿ ರಾಜ್ಯಾಧ್ಯಕ್ಷ ಎನ್.ಮಹೇಶ್

Update: 2018-03-21 23:27 IST

ಕೊಳ್ಳೇಗಾಲ.ಮಾ.21: ಪ್ರತಿ ಚುನಾವಣೆಯಲ್ಲಿ ಮತದಾರರ ಬೆಂಬಲದೊಂದಿಗೆ ಒಂದೊಂದೇ ಸ್ಥಾನದಲ್ಲಿ ಮುಂಚೂಣಿಗೆ ಬಂದಿದ್ದು, ಈ ಬಾರಿಯ ಚುನಾವಣೆಯಲ್ಲಿ ಅತ್ಯಧಿಕ ಮತಗಳಿಂದ ಗೆಲುವು ಸಾಧಿಸಲಿದ್ದೇನೆ ಎಂದು ಬಹುಜನ ಸಮಾಜ ಪಾರ್ಟಿ ರಾಜ್ಯಾಧ್ಯಕ್ಷ ಎನ್.ಮಹೇಶ್ ಅವರು ಹೇಳಿದರು.

ತಾಲೂಕಿನ ಚಿಲಕವಾಡಿ ಗ್ರಾಮದ ಶಂಭುಲಿಂಗೇಶ್ವರ ದೇವಾಲಯದ ಸಮೀಪದಲ್ಲಿ ಬಿಎಸ್‍ಪಿ ಹಾಗೂ ಜೆಡಿಎಸ್ ವತಿಯಿಂದ ನಡೆದ ಬೂತ್ ಮಟ್ಟದ ಕಾರ್ಯಕರ್ತರ ಸಭೆ ಹಾಗೂ ಪಕ್ಷ ಸೇರ್ಪಡೆ ಸಭೆಯಲ್ಲಿ ಅವರು ಮಾತನಾಡಿದರು.

2004ರ ಚುನಾವಣೆಯಲ್ಲಿ 4ನೇ ಸ್ಥಾನ, 2008ರ ಚುನಾವಣೆಯಲ್ಲಿ 3ನೇ ಸ್ಥಾನ ಹಾಗೂ 2013ರ ಚುನಾವಣೆಯಲ್ಲಿ 2 ನೇ ಸ್ಥಾನ ಗಲ್ಲಿಸಿದ್ದೇನೆ. 2018 ರ ಚುನಾವಣೆಯಲ್ಲಿ ಅತೀ ಹೆಚ್ಚಿನ ಮತಗಳ ಮೂಲಕ ಮೊದಲ ಸ್ಥಾನ ಗಲ್ಲಿಸುವ ವಿಶ್ವಾಸ ವ್ಯಕ್ತಪಡಿಸಿದರು.

ಈ ಬಾರಿ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದ ವರಿಷ್ಠರಾದ ಹೆಚ್.ಡಿ ದೇವೆಗೌಡ ಹಾಗೂ ಕುಮಾರಸ್ವಾಮಿರವರ ಬಿಎಸ್‍ಪಿ ಜೊತೆಯ ಮೈತ್ರಿಯಿಂದಾಗಿ ಈ ಬಾರಿ ಚುನಾವಣೆಯಲ್ಲಿ ಅತೀ ಹೆಚ್ಚಿನ ಮತಗಳಿಂದ ನಾನು ಗೆಲ್ಲುತ್ತೇನೆ ಹಾಗೂ ಜೆಡಿಎಸ್ ಮತ್ತು ಬಿಎಸ್‍ಪಿ ಮೈತ್ರಿಯ ಸರ್ಕಾರ ರಾಜ್ಯದಲ್ಲಿ ರಚನೆಯಾಗಲಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ವಿವಿಧ ಪಕ್ಷದ ತೊರೆದು ಕುಂತೂರು ಪಂಚಾಯತ್, ಟಗರಪುರ ಪಂಚಾಯತ್ ಹಾಗೂ ಮುಳ್ಳೂರು ಪಂಚಯತ್ ವ್ಯಾಪ್ತಿಯ ನೂರಾರು ಯುವಕರು ರಾಜ್ಯಾಧ್ಯಕ್ಷ ಎನ್.ಮಹೇಶ್ ನೇತೃತ್ವದಲ್ಲಿ ಬಿಎಸ್‍ಪಿಗೆ ಸೇರ್ಪಡೆಗೊಂಡರು.

ಸಭೆಯಲ್ಲಿ ಬಿಎಸ್‍ಪಿ ಜಿಲ್ಲಾಧ್ಯಕ್ಷ ಬಾಗಲಿರೇವಣ್ಣ, ಜೆಡಿಎಸ್ ಮುಖಂಡರಾದ ಹೊಂಡರಬಾಳು ರಮೇಶ್, ಶಶಿಶೇಖರ್, ಬಿಎಸ್‍ಪಿ ಮುಖಂಡರಾದ ಕಾಂತಪ್ಪ, ಕಾಂತರಾಜ್‍ ಅಚಾರ್, ಶಿವನಂಜಪ್ಪ, ಗೊಂಬೆ ಸಿದ್ದೇಶ್‍ ಬಾಬು, ಗುರುರಾಜ್ ಆಚಾರ್, ಬಸವಣ್ಣ, ರೇವಣ್ಣ, ಜಕಾವುಲ್ಲಾ, ಸಮೀಉಲ್ಲಾ, ಇನಾಯತ್, ನಗರಸಭೆ ಸದಸ್ಯ ರಾಮಕೃಷ್ಣ, ರಂಗಸ್ವಾಮಿ, ನಾಗಸುಂದರಮ್ಮ ಜಗದೀಶ್ ಹಾಗೂ ಇನ್ನಿತರರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News