ಮಡಿಕೇರಿ: ಬಿಳಿಗೇರಿ ರಸ್ತೆ ಅವ್ಯವಸ್ಥೆ; ಗ್ರಾಮಸ್ಥರ ಅಸಮಾಧಾನ

Update: 2018-03-21 18:17 GMT

ಮಡಿಕೇರಿ, ಮಾ.21 : ಚುನಾವಣೆ ಸಮೀಪಿಸುತ್ತಿರುವಂತೆಯೇ ಜಿಲ್ಲೆಯ ಗ್ರಾಮೀಣ ಪ್ರದೇಶದ ವಿವಿಧ ಭಾಗಗಳಲ್ಲಿ ರಸ್ತೆ ಅಭಿವೃದ್ಧಿಯ ಹೆಸರಿನಲ್ಲಿ ಭೂಮಿಪೂಜೆಯ ಹರಕೆ ನಡೆಯುತ್ತಿದೆ. ಆದರೆ ಹಾಕತ್ತೂರಿನಿಂದ ಬಿಳಿಗೇರಿವರೆಗಿನ ರಸ್ತೆ ಅವ್ಯವಸ್ಥೆ ಆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಗೆ ಪ್ರೀತಿ ಎನ್ನುವಂತಿದೆ.

ಸುಮಾರು 3.5 ಕಿ.ಮೀ ನ ಹಾಕತ್ತೂರಿನಿಂದ-ಬಿಳಿಗೇರಿ ರಸ್ತೆ ಸಂಪೂರ್ಣವಾಗಿ ಹದಗೆಟ್ಟಿದ್ದು, ವಾಹನಗಳ ಓಡಾಟವೇ ಸ್ಥಗಿತಗೊಂಡಿದೆ. ಶಾಲಾ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ನಡೆದಾಡಲು ಕೂಡ ಸಾಧ್ಯವಾಗದಷ್ಟು ರಸ್ತೆ ಹದಗೆಟ್ಟಿದೆ.  

ಕಳೆದ 10 ವರ್ಷಗಳಿಂದ ಡಾಮರು ಕಾಣದ ರಸ್ತೆಯನ್ನು ಹಳ್ಳಕೊಳ್ಳಗಳಲ್ಲಿ ಹುಡುಕಬೇಕಾದ ಪರಿಸ್ಥಿತಿ ಇದೆ. ರಸ್ತೆ ಅವ್ಯವಸ್ಥೆ ಬಗ್ಗೆ ಸಂಬಂಧಿಸಿದ ಅಧಿಕಾರಿಗಳ ಗಮನ ಸೆಳೆದಿದ್ದರೂ ಸೂಕ್ತ ಸ್ಪಂದನೆ ದೊರೆತ್ತಿಲ್ಲವೆಂದು ಆರೋಪಿಸಿರುವ ಗ್ರಾಮಸ್ಥರು ವಿವಿಧ ಸಂಘ ಸಂಸ್ಥೆಗಳ ಬೆಂಬಲದೊಂದಿಗೆ ರಸ್ತೆ ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News