ಎನ್ ಡಿಎ ಮೈತ್ರಿಕೂಟದಿಂದ ಹೊರನಡೆದ ಗೂರ್ಖಾ ಜನಮುಕ್ತಿ ಮೋರ್ಚಾ

Update: 2018-03-24 10:23 GMT

ಹೊಸದಿಲ್ಲಿ, ಮಾ.24: ಬಿಜೆಪಿಯು ಗೂರ್ಖಾ ಜನರಿಗೆ ನಂಬಿಕೆ ದ್ರೋಹ ಎಸಗಿದೆ ಎಂದು ಆರೋಪಿಸಿರುವ ಗೂರ್ಖಾ ಜನಮುಕ್ತಿ ಮೋರ್ಚಾ ಎನ್ ಡಿಎ ಮೈತ್ರಿಕೂಟದಿಂದ ಹೊರಬಂದಿದೆ. ಬಿಜೆಪಿ ನೇತೃತ್ವದ ಎನ್ ಡಿಎ ಜೊತೆಗೆ ಪಕ್ಷಕ್ಕೆ ಯಾವುದೇ ಸಂಬಂಧವಿಲ್ಲ ಎಂದು ಜಿಜೆಎಂ ಮುಖ್ಯಸ್ಥ ಎಲ್.ಎಂ. ಲಾಮಾ ಹೇಳಿದ್ದಾರೆ.

ದಾರ್ಜಲಿಂಗ್ ಕ್ಷೇತ್ರದಿಂದ 2009ರಲ್ಲಿ ಸ್ಪರ್ಧಿಸಿದ್ದ ಬಿಜೆಪಿ ನಾಯಕ ಜಸ್ವಂತ್ ಸಿಂಗ್ ರನ್ನು ಜಿಜೆಎಂ ಬೆಂಬಲಿಸಿತ್ತು. ಆದರೆ ಬಿಜೆಪಿ ನಾಯಕರ ಆಡಳಿತದ ಬಗ್ಗೆ ಪಕ್ಷವು ಅಸಮಾಧಾನ ಹೊಂದಿತ್ತು. ಆದರೂ 2014ರಲ್ಲಿ ಬಿಜೆಪಿ ಅಭ್ಯರ್ಥಿ ಎಸ್.ಎಸ್. ಅಹುಲುವಾಲಿಯಾರಿಗೆ ಜಿಜೆಎಂ ಬೆಂಬಲ ನೀಡಿತ್ತು. ಆದರೆ ಪಕ್ಷದ ನೂತನ ಮುಖ್ಯಸ್ಥ ಬಿನಯ್ ತಮಂಗ್ ಎನ್ ಡಿಎ ಮೈತ್ರಿಕೂಟದಿಂದ ಹೊರಬರಲು ನಿರ್ಧರಿಸಿದ್ದಾರೆ.

ಕಳೆದ ವರ್ಷದ ನವೆಂಬರ್ ನಲ್ಲಿ ಜಿಜೆಎಂ ಪಕ್ಷದ ಮುಖ್ಯಸ್ಥ ಬಿಮಾಲ್ ಗುರಾಂಗ್, ಕಾರ್ಯದರ್ಶಿ ರೋಶನ್ ಗಿರಿಯವರನ್ನು 6 ತಿಂಗಳ ಕಾಲ ಉಚ್ಛಾಟಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News