ಕೊಳ್ಳೇಗಾಲ: ಜನಾರ್ಶೀವಾದ ಯಾತ್ರೆ ರೋಡ್ ಶೋ, ಇಂದಿರಾ ಕ್ಯಾಂಟೀನ್ ಉದ್ಘಾಟನೆ
ಕೊಳ್ಳೇಗಾಲ,ಮಾ.24: ರಾಹುಲ್ ಗಾಂಧಿ ನೇತೃತ್ವದಲ್ಲಿ ಪಟ್ಟಣದಲ್ಲಿ ನಡೆದ ಜನಾರ್ಶೀವಾದ ಯಾತ್ರೆ ರೋಡ್ ಶೋ ಯಶಸ್ವಿಯಾಗಿ ನಡೆಯಿತು.
ಯಾತ್ರೆಯಲ್ಲಿ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷ ರಾಹುಲ್‍ಗಾಂಧಿ, ಲೋಕಸಭಾ ವಿರೋಧಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್, ಕೆಪಿಸಿಸಿ ಕಾರ್ಯಧ್ಯಕ್ಷ ದಿನೇಶ್ ಗುಂಡುರಾವ್, ಚುನಾವಣಾ ಪ್ರಚಾರ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಕರ್ನಾಟಕ ರಾಜ್ಯ ಉಸ್ತುವರಿ ವೇಣುಗೋಪಾಲ್, ಸಂಸದ ಧೃವನಾರಾಯಣ್, ಕೊಳ್ಳೇಗಾಲ ಕ್ಷೇತ್ರ ಶಾಸಕ ಎಸ್.ಜಯಣ್ಣ, ಹನೂರು ಶಾಸಕ ಆರ್.ನರೇಂದ್ರ ಸೇರಿದಂತೆ ಕಾಂಗ್ರೆಸ್ ಪಕ್ಷದ ಹಲವಾರು ಮುಖಂಡರು ಭಾಗವಹಿಸಿದ್ದರು.
ಅಚ್ಗಾಲ್ ಸರ್ಕಲ್‍ನಿಂದ ಯಾತ್ರೆಯನ್ನು ಡೋಲು ಕುಣಿತ ತಮಟೆಯಿಂದ ಸ್ವಾಗತಿಸಿದರು. ರಸ್ತೆಯುದ್ದಕ್ಕೂ ಸಾವಿರಾರು ಜನರು ವೀಕ್ಷಿಸಿ ಹರ್ಷ ವ್ಯಕ್ತಪಡಿಸಿದರು.
ನಂತರ ಪಟ್ಟಣದ ಸಕಾರಿ ಆಸ್ಪತ್ರೆಯ ಮುಂಭಾಗದಲ್ಲಿ ಉದ್ಘಾಟನೆಗೆ ಸಿದ್ದಗೊಂಡಿದ್ದ ಇಂದಿರಾ ಕ್ಯಾಂಟೀನ್‍ಗೆ ರಾಹುಲ್‍ಗಾಂಧಿರವರು ಮುಖ್ಯಮಂತ್ರಿ ಸಿದ್ದರಾಮಯ್ಯರವರ ಜೊತೆಗೂಡಿ ಚಾಲನೆ ನೀಡಿದರು.
ಬಳಿಕ ಒಳ ಪ್ರವೇಶಿಸಿ ಬಿಸಿಯಾಗಿ ತಯಾರಾಗಿದ್ದ ಲಘು ಉಪಹಾರವಾದ ಇಡ್ಲಿ, ವಡೆ, ಮಸಾಲಾ ದೋಸೆಯನ್ನು ರಾಜ್ಯ ಸಚಿವರು ಹಾಗೂ ಪಕ್ಷದ ಮುಖಂಡರ ಜೊತೆಗೂಡಿ ಸೇವಿಸಿದರು. ನಂತರ ಮಳ್ಳವಳಿ ತಾಲೂಕಿಗೆ ಪ್ರಯಾಣ ಬೆಳೆಸಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಗೆ ಸೇರ್ಪಡೆಯಾದ ಮಾಜಿ ಶಾಸಕ ಎ.ಆರ್.ಕೃಷ್ಣಮೂರ್ತಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮರಿಸ್ವಾಮಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ತೋಟೇಶ್, ನಗರಸಭೆ ಅಧ್ಯಕ್ಷ ಶಾಂತರಾಜು, ಜಿಲ್ಲಾ ನೋಡಲ್ ಯೋಜನಾಧಿಕಾರಿ ಕೆ.ಸುರೇಶ್, ಪೌರಾಯುಕ್ತ ಡಿ.ಕೆ.ಲಿಂಗರಾಜು, ಇಂಜಿನಿಯರ್ ನಾಗೇಂದ್ರ ಹಾಗೂ ಇನ್ನಿತರರು ಇದ್ದರು.