ನಿಯಮ ಉಲ್ಲಂಘಿಸಿ ಮದ್ಯ, ಮಾಂಸ ಮಾರಾಟ: ಆರೋಪ
ಸುಂಟಿಕೊಪ್ಪ, ಮಾ.25: ಸರಕಾರ ಮಹಾಪುರುಷರ ಜಯಂತಿ ದಿನ ಮದ್ಯ, ಮಾಂಸ ಮಾರಾಟ ನಿಷೇಧಿಸಬೇಕೆಂದು ಷರತ್ತು ಇದ್ದರು ಯಾವುದೇ ಭಯವಿಲ್ಲದೆ ಮಾಂಸದ ಅಂಗಡಿಕಾರರು ಮಾರಾಟ ಮಾಡುತ್ತಿದ್ದಾರೆ ಎಂದು ನಾಗರಿಕ ಹೋರಾಟ ಸಮಿತಿ ಅಧ್ಯಕ್ಷ ರಾಜನ್ ಜಿ. ಆರೋಪಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು. ರವಿವಾರ ರಾಮನವಮಿ ದಿನ ಮೀನು ಮಾಂಸ ಮಾರಾಟಕ್ಕೆ ಅವಕಾಶ ಇರುವುದಿಲ್ಲ ಎಂದು ಗ್ರಾಪಂಯಿಂದ ಮೀನು, ಕೋಳಿ, ಕುರಿ, ಹಂದಿ ಮಳಿಗೆ ಹರಾಜು ಪಡೆದವರಿಗೆ ಪರವಾನಿಗೆಯಲ್ಲಿ ನಿಬಂಧನೆ ಹಾಕಿ ಕೊಡಲಾಗಿದೆ. ಆದರೆ ಪರವಾನಿಗೆ ಪಡೆದ ಹಕ್ಕುದಾರರು ಕಾನೂನು ಉಲ್ಲಂಘಿಸಿ ಎಂದಿನಂತೆ ವ್ಯಾಪಾರ ನಡೆಸುತ್ತಿರುವುದನ್ನು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಈ ಬಗ್ಗೆ ಸುಂಟಿಕೊಪ್ಪ ಗ್ರಾಪಂ ಪಿಡಿಒ ಮೇದಪ್ಪ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿ ದಾಗ ಈ ಮೊದಲೇ ರಾಮನವಮಿಯಂದು ಮಾಂಸ ಮಾರಾಟ ಮಾಡಬಾ ರದೆಂದು ಪಂಚಾಯತ್ ಪರವಾನಿಗೆ ಪಡೆದ ವಾ್ಯಪಾರಸ್ಥರಿಗೆ ನೋಟಿಸು ನೀಡಲಾಗಿದೆ.
ಅದನ್ನು ಉಲ್ಲಂಘಸಿದಕ್ಕಾಗಿ ಪಂಚಾಯತ್ ರಾಜ್ ಕಾಯ್ದೆಯ ಗ್ರಾಮ ಸ್ವರಾಜ್ ನಿಯಮದ ಪ್ರಕಾರ ಕ್ರಮ ಕೈಗೊಳ್ಳಲಾಗುವುದೆಂದು ತಿಳಿಸಿದ್ದಾರೆ ಎಂದು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.