ಶ್ರೀರಾಮ ನವಮಿಯ ಸಂಭ್ರಮ...
Update: 2018-03-25 23:54 IST
ಬೆಂಗಳೂರು, ಸಾಂಸ್ಕೃತಿಕ ನಗರಿ ಮೈಸೂರು ಸೇರಿದಂತೆ ರಾಜ್ಯಾದ್ಯಂತ ಶ್ರೀರಾಮನವಮಿಯ ಸಂಭ್ರಮ-ಸಡಗರ ಮನೆ ಮಾಡಿತ್ತು. ರವಿವಾರ ಬೆಳಗ್ಗೆಯಿಂದ ಶ್ರೀರಾಮ ಮತ್ತು ಆತನ ಭಕ್ತ ಆಂಜನೇಯ ಸ್ವಾಮಿ ದೇವಾಲಯಗಳಲ್ಲಿ ವಿಶೇಷ ಪೂಜೆಗಳು ನೆರವೇರಿದವು. ಬೆಂಗಳೂರಿನ ಮಲ್ಲೇಶ್ವರಂ, ಯಶವಂತಪುರ, ರಾಜಾಜಿನಗರ, ಜಯನಗರ, ಜೆಪಿ ನಗರ, ಕೆ.ಆರ್.ಮಾರುಕಟ್ಟೆ ಸೇರಿದಂತೆ ವಿವಿಧೆಡೆಗಳಲ್ಲಿ ರಸ್ತೆಯ ಇಕ್ಕೆಲಗಳಲ್ಲಿ ಮಜ್ಜಿಗೆ, ಕೋಸಂಬರಿ, ಕರಬೂಜ ಹಣ್ಣಿನಿಂದ ಮಾಡಿದ ಬೆಲ್ಲದ ಪಾನಕವನ್ನು ಸಾರ್ವಜನಿಕರಿಗೆ ವಿತರಣೆ ಮೂಲಕ ರಾಮನವಮಿಯ ಆಚರಿಸಲಾಯಿತು.