ಸತ್ಯದ ನಾಡಲ್ಲಿ ಅಮಿತ್ ಶಾ ಸತ್ಯ ಹೇಳಿದ್ದಾರೆ: ಡಿಕೆ ಶಿವಕುಮಾರ್

Update: 2018-03-27 12:38 GMT

ದಾವಣಗೆರೆ,ಮಾ.27: ಇಂದು ಚುನಾವಣೆ ಘೋಷಣೆಯಾಗಿದೆ. ಇಂದಿನಿಂದ ರಾಜ್ಯದಲ್ಲಿ ಧರ್ಮಯುದ್ಧ ಶುರುವಾಗಲಿದೆ ಎಂದು ಡಿ.ಕೆ. ಶಿವಕುಮಾರ್ ಹೇಳಿದರು.

ಸತ್ಯದ ನಾಡಲ್ಲಿ ಅಮಿತ್ ಶಾ ಸತ್ಯ ಹೇಳಿದ್ದಾರೆ. ಈ ಬಗ್ಗೆ ಅವರಿಗೆ ಯಾರೂ ಹೇಳಿ ಕೊಟ್ಟಿಲ್ಲ. ಅದು ಅವರ ಹೃದಯದಿಂದ ಬಂದ ಮಾತುಗಳು. ರಾಜ್ಯದ ಜನರ ಪರವಾಗಿ ನಾನು ಅಮಿತ್ ಶಾ ಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು 'ಯಡಿಯೂರಪ್ಪರ ಸರಕಾರ ಭ್ರಷ್ಟಾಚಾರದಲ್ಲಿ ನಂ.1 ಸರಕಾರ' ಎಂದು ಹೇಳಿ ಎಡವಟ್ಟು ಮಾಡಿಕೊಂಡ ಅಮಿತ್ ಶಾ ಹೇಳಿಕೆಗೆ ಡಿಕೆ ಶಿವಕುಮಾರ್ ಪ್ರತಿಕ್ರಿಯೆ ನೀಡಿದರು.

ಎಪ್ರಿಲ್ 3 ರಿಂದ ರಾಹುಲ್ ಗಾಂಧಿ ಶಿವಮೊಗ್ಗ, ದಾವಣಗೆರೆ ಪ್ರವಾಸ: ಎ.3 ರಂದು ಹೊನ್ನಾಳಿ, ಹರಿಹರ ಹಾಗೂ ದಾವಣಗೆರೆ ಪ್ರವಾಸ ಮಾಡಲಿದ್ದು, ಈ ಸಂಬಂಧ ಸಮಾವೇಶದ ಸ್ಥಳ ಪರಿಶೀಲನೆಗೆ ಆಗಮಿಸಿದ್ದ ಡಿ.ಕೆ.ಶಿವಕುಮಾರ್, ದಾವಣಗೆರೆಯ ಹೈಸ್ಕೂಲ್ ಮೈದಾನ ಪರಿಶೀಲನೆ ನಡೆಸಿದರು. ನಂತರ ಮಾತನಾಡಿ, 'ಚುನಾವಣೆಗೆ ಸಕಲ ಸಿದ್ದತೆ ಮಾಡಿಕೊಂಡಿದ್ದೇವೆ. ಕೆಲ ದಿನದಲ್ಲೆ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗಲಿದೆ. ಈ ಬಗ್ಗೆ ವರಿಷ್ಟರು ತೀರ್ಮಾನ ಕೈಗೊಳ್ಳಲಿದ್ದಾರೆ ಎಂದರು.

ಕಾಂಗ್ರೆಸ್-ಜೆಡಿಎಸ್ ಮೈತ್ರಿ ವಿಚಾರ ಪ್ರತಿಕ್ರಿಯೆ ನೀಡಿ, ದೇವೇಗೌಡರ ಹೇಳಿಕೆಗೆ ಹೇಳಿಕೆಗೆ ಪ್ರತಿಕ್ರಿಯೆ ನೀಡುವಷ್ಟು ದೊಡ್ಡವನು ನಾನಲ್ಲ. ಚುನಾವಣೆಯಲ್ಲಿ ನಾವು ಹಣದ ಹೊಳೆ ಹರಿಸಲ್ಲ. ಬೇರೆಯರವ ಬಗ್ಗೆ ಹೇಳಬೇಕಾಗಿಲ್ಲ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News