×
Ad

ಚನ್ನಗಿರಿ: ಗಾಂಜಾ ಮಾರಾಟ; ಮಹಿಳೆ ಸೇರಿ ಮೂವರ ಬಂಧನ

Update: 2018-03-27 20:56 IST

ಚನ್ನಗಿರಿ,ಮಾ.27: ಗಾಂಜಾ ಸೊಪ್ಪನ್ನು ಮಾರುತ್ತಿದ್ದ ಓರ್ವ ಮಹಿಳೆ ಸೇರಿದಂತೆ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿ, 40 ಸಾವಿರ ರೂ. ಮೌಲ್ಯದ 3 ಕೆಜಿ ಗಾಂಜಾ, ಕೃತ್ಯಕ್ಕೆ ಬಳಸಿದ್ದ ಕಾರನ್ನು ಸೋಮವಾರ ತಾಲೂಕಿನ ಮರಬನಹಳ್ಳಿ ಗ್ರಾಮದ ಬಸವಾಪಟ್ಟಣ ರಸ್ತೆಯಲ್ಲಿ ವಶಪಡಿಸಿದ್ದಾರೆ. 

ತಾಲೂಕಿನ ಮರಬನಹಳ್ಳಿ ಗ್ರಾಮದ ಹಾಲಸ್ವಾಮಿ, ಈತನ ಪತ್ನಿ ಮಂಜುಳಾ ಹಾಗೂ ಈಶ್ವರ ಎಂಬುವರನ್ನು ಬಂಧಿಸಲಾಗಿದೆ. ಮರಬನಹಳ್ಳಿ ಗ್ರಾಮದ ಬಸವಾಪಟ್ಟಣದ ರಸ್ತೆಯಲ್ಲಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಬಗ್ಗೆ ದೊರೆತ ಖಚಿತ ಮಾಹಿತಿ ಆದರಿಸಿ ದಾವಣಗೆರೆ ಸಿಇಎನ್ ಅಪರಾಧ ಠಾಣೆ ಪೊಲೀಸ್ ಇನ್ಸ್ ಪೆಕ್ಟರ್ ಟಿ.ವಿ. ದೇವರಾಜ, ಬಸವಾಪಟ್ಟಣ ಎಸ್‍ಐ ರಾಜು ಮತ್ತು ತಂಡ ದಾಳಿ ನಡೆಸಿತು.

ದಾಳಿಯಲ್ಲಿ 40 ಸಾವಿರ ಮೌಲ್ಯದ 3 ಕೆಜಿ ಗಾಂಜಾ, ಕೃತ್ಯಕ್ಕೆ ಬಳಸಿದ್ದ ವ್ಯಾಗನಾರ್ ಕಾರ್ ವಶಕ್ಕೆ ಪಡೆಯಲಾಗಿದೆ. ಈ ಕುರಿತು ಬಸವಾಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News