ಮುಂದಿನ ಚುನಾವಣೆಯಲ್ಲೂ ನಾನೇ ಸ್ಪರ್ಧಿಸುತ್ತೇನೆ: ಶಾಮನೂರು ಶಿವಶಂಕರಪ್ಪ
Update: 2018-03-27 20:58 IST
ದಾವಣಗೆರೆ,ಮಾ.27: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ನಾನೇ ಸ್ಪರ್ಧಿಸುತ್ತೇನೆ ಎಂದು ಶಾಸಕ ಡಾ. ಶಾಮನೂರು ಶಿವಶಂಕರಪ್ಪ ತಿಳಿಸಿದರು.
ಇಲ್ಲಿನ 8ನೇ ವಾರ್ಡ್ ವ್ಯಾಪ್ತಿಯ ಜಾಲಗಾರ ಓಣಿಯ 200ಕ್ಕೂ ಹೆಚ್ಚು ನಿವಾಸಿಗಳಿಗೆ ಹಕ್ಕುಪತ್ರ ವಿತರಿಸಿದ ನಂತರ ಮಾತನಾಡಿದ ಅವರು, ಬರುವ ವಿಧಾನಸಭಾ ಚುನಾವಣೆಯಲ್ಲಿ ನಾನೇ ಮತ್ತೊಮ್ಮೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದು, ನನ್ನ ಕೆಲಸ ಮತ್ತು ರಾಜ್ಯದ ಕಾಂಗ್ರೆಸ್ ಸರ್ಕಾರದ ಸಾಧನೆ ನೋಡಿ ನಮ್ಮನ್ನು ಬೆಂಬಲಿಸಿ ಎಂದು ನಾಗರಿಕರಿಗೆ ಕರೆ ನೀಡಿದರು.
ಮಹಾನಗರ ಪಾಲಿಕೆ ಸದಸ್ಯ ಹೆಚ್.ಬಿ. ಗೋಣೆಪ್ಪ, ಆಶ್ರಯ ಸಮಿತಿ ಸದಸ್ಯರುಗಳಾದ ಬಿ.ಎಂ.ಈಶ್ವರ್, ಸೌಭಾಗ್ಯ ಬಂಡಿ ನಾಗರಾಜ್, ಪಾಲಿಕೆಯ ಗೋವಿಂದನಾಯ್ಕ, ಮುಖಂಡರುಗಳಾದ ಇಟ್ಟಿಗುಡಿ ಮಂಜುನಾಥ್, ದುಗ್ಗೇಶಿ, ಮಂಜುನಾಥ್, ವಿಜಯ್ ಕುಮಾರ್, ಅಣ್ಣಪ್ಪ, ಸ್ವಾಮಿ, ಅಜ್ಜಪ್ಪ ಇದ್ದರು.