×
Ad

ಹನೂರು: ಪ್ರೋ. ಮಾದಯ್ಯರವರಿಗೆ ಗೌರವ ಸಮರ್ಪಣೆ

Update: 2018-03-28 18:02 IST

ಹನೂರು,ಮಾ.28: ಪಟ್ಟಣದ ಹೊರ ವಲಯದಲ್ಲಿ ಇರುವ ಮಂಜುನಾಥ್‍ರವರ ನಿವಾಸದಲ್ಲಿ ಪ್ರೋ. ಮಾದಯ್ಯರವರಿಗೆ ಗೌರವ ಸಮರ್ಪಣೆಯನ್ನು ರಾಜ್ಯ ಬಿಜೆಪಿ ಘಟಕದ ಹಿಂದುಳಿದ ವರ್ಗಗಳ ಕಾರ್ಯಕಾರಿಣಿ ಸಮಿತಿ ಸದಸ್ಯ ಮಂಜುನಾಥ್ ಪರವಾಗಿ ಹಲವರು ಮುಖಂಡರು ಮಾಡಿದರು.

ನಂತರ ಮಾತನಾಡಿದ ಮುಖಂಡ ಸಕಲೇಶ್, ಬಿಜೆಪಿಯು ಕ್ಷೇತ್ರದಲ್ಲಿ ಹಿಂದುಳಿದ ವರ್ಗದ ಅಭ್ಯರ್ಥಿಗೆ ಮಣೆ ಹಾಕಿದ್ದೇ ಆದಲ್ಲಿ ಹನೂರು ವಿಧಾನ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ರಾಜ್ಯ ಬಿಜೆಪಿ ಘಟಕದ ಹಿಂದುಳಿದ ವರ್ಗಗಳ ಕಾರ್ಯಕಾರಿಣಿ ಸಮಿತಿ ಸದಸ್ಯ ಮಂಜುನಾಥ್‍ಗೆ ಟಿಕೆಟ್ ಒಲಿಯುವುದರಲ್ಲಿ ಸಂಶಯವಿಲ್ಲ ಎಂದು ತಿಳಿಸಿದರು.

ನಂತರ ಮಾತನಾಡಿದ ಮಹೇಶ್, ಹನೂರು ವಿಧಾನಕ್ಷೇತ್ರ ತುಂಬಾ ವಿಶಾಲತೆಯಿಂದ ಕೂಡಿದ್ದು, ಹೆಚ್ಚು ಕಾಡಂಚಿನ ಗ್ರಾಮಗಳಿಂದ ಕೂಡಿದೆ. 2,01,579 ಮತದಾರರಿದ್ದು, ಇದರಲ್ಲಿ ಲಿಂಗಾಯತರು ಹೆಚ್ಚಿನ ಸಂಖ್ಯೆಯಲ್ಲಿದ್ದರೆ, ದಲಿತರು 2ನೇ ಸ್ಥಾನದಲ್ಲಿ, ಕುರುಬರು, ಸೋಲಿಗರು, ನಾಯಕರು ಮೂರನೇ ಸ್ಥಾನದಲ್ಲಿದ್ದು, ಅಲ್ಪಸಂಖ್ಯಾತರು 4ನೇ ಸ್ಥಾನದಲ್ಲಿದ್ದಾರೆ. ಕ್ಷೇತ್ರದಲ್ಲಿ ಲಿಂಗಾಯತರು ಹೆಚ್ಚಾಗಿದ್ದರೂ ಸಹ ಈ ಕ್ಷೇತ್ರದಲ್ಲಿ ಕೇವಲ ಎಂಟು ಸಾವಿರ ಮತಗಳನ್ನು ಹೊಂದಿರುವ ಒಕ್ಕಲಿಗ ನಾಯಕರು ಹೆಚ್ಚಾಗಿ ಗೆದ್ದಿರುವುದು ಒಂದು ಇತಿಹಾಸ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News