×
Ad

ರಾಜ್ಯ ವಕೀಲರ ಪರಿಷತ್ ಚುನಾವಣೆ: ಹುಬ್ಬಳ್ಳಿ ಸೇರಿ ಮೂರು ನಗರಗಳಲ್ಲಿ ಮಾ.31ರಂದು ಮರು ಮತದಾನ

Update: 2018-03-28 19:57 IST

ಬೆಂಗಳೂರು, ಮಾ.28: ಕುಷ್ಟಗಿ, ಹುಬ್ಬಳ್ಳಿ ಮತ್ತು ಚಿಕ್ಕಮಗಳೂರು ನಗರಗಳಲ್ಲಿ ಇದೇ 31ರಂದು ರಾಜ್ಯ ವಕೀಲರ ಪರಿಷತ್ ಚುನಾವಣೆಗೆ ಮರು ಮತದಾನ ನಡೆಯಲಿದೆ.

ಪರಿಷತ್‌ನ 25 ಸದಸ್ಯ ಸ್ಥಾನಗಳಿಗೆ ಇದೆ 27ರಂದು ಚುನಾವಣೆ ನಡೆದಿತ್ತು. ಆದರೆ, ಕುಷ್ಟಗಿಯಲ್ಲಿ ಮತಪತ್ರಗಳ ಸಂಖ್ಯೆಯಲ್ಲಿ ಏರುಪೇರು ಇದ್ದ ಕಾರಣ ಮತದಾನ ನಡೆಯಲಿಲ್ಲ.

ಹುಬ್ಬಳ್ಳಿಯಲ್ಲಿ ಮತದಾನ ಪೂರ್ಣಗೊಂಡ ಬಳಿಕ ಉಳಿದ 114 ಮತಗಳನ್ನು ಮೂವರು ಅಭ್ಯರ್ಥಿಗಳು ತಲಾ 38 ಮತಗಳಂತೆ ಹಂಚಿಕೊಂಡಿದ್ದಾರೆ ಹಾಗೂ ಚಿಕ್ಕಮಗಳೂರಿನಲ್ಲಿ ನಕಲಿ ಮತದಾನ ನಡೆದಿದೆ ಎಂಬ ಕಾರಣಕ್ಕೆ ಈ ಮೂರೂ ವಕೀಲರ ಸಂಘಗಳಲ್ಲಿ ಮರು ಮತದಾನಕ್ಕೆ ನಿರ್ಧರಿಸಲಾಗಿದೆ ಎಂದು ಚುನಾವಣಾಧಿಕಾರಿಗಳಾದ ಬಸವರಾಜ ಹುಡೇದಗಡ್ಡಿ ಹಾಗೂ ಎ.ಜಿ.ಶಿವಣ್ಣ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮತಪೆಟ್ಟಿಗೆ ಬಂದಿಲ್ಲ: ರಾಜ್ಯದ ಎಲ್ಲ ಕಡೆಯಿಂದ ಮತಪೆಟ್ಟಿಗೆಗಳು ಇನ್ನೂ ಬೆಂಗಳೂರು ಕೇಂದ್ರಕ್ಕೆ ತಲುಪಿಲ್ಲ ಮತ್ತು ಮೂರು ಕ್ಷೇತ್ರಗಳ ಮರು ಮತದಾನ ಪೂರ್ಣಗೊಂಡ ಬಳಿಕ ಎಣಿಕೆ ಪ್ರಕ್ರಿಯೆ ಆರಂಭವಾಗಲಿದೆ ಎಂದು ಹಿರಿಯ ವಕೀಲ ಜಯಕುಮಾರ್ ಎಸ್.ಪಾಟೀಲ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News